12.06.2023 Amrat Thalitha Kum – India, Karnataka Region Meeting was held at Canara Organisation for Development and Peace (CODP) Nanthur, Mangalore organized by Sr Leena D’Costa BS the Amrat Karnataka Regional Coordinator . The commenced at 9.30am with a prayer led by Sr Anna Maria and Sr Herita from Shubadha Centre, Mangalore. Sr Meera RGS the President of Amrat Thalitha Kum – India Presided over the Programme. Sr Shanthi Priya BS, the General Councillor of Bethany Congregation was the Inaugurator of the day’s Programme. In her Inaugural speech she gave a Clarion call to commit for the cause of Human misery and slavery. Sr Meera in her presidential speech highlighted the existing problem of Human trafficking and its present scenario world over.

Sr Anna Maria BS the National Executive member of Amrat Thalitha Kum – India spoke about significance of International day against child labour. She shared about her experiences in running a Child Labour School at Humnabad, Bidar, in Northern part of Karnataka. Sr Rajani SRA, the Regional Secretary presented the minutes of previous meeting through PPT presentation. Sr Sherly SJL, the India Coordinator of Arise Foundation shared about various programmes of Arise Foundation and its funding patterns. Sr Meera briefed about the Hilton Fund for Sisters and the selected regions for its funding in order to strengthen the network of the sisters all over India.

 

 

 

 

 

 

 

 

 

 

 

 

 

 

 

 

 

 

 

 

 

The Diocesan coordinators presented a small Action plan to combat Human trafficking in their respective dioceses after a short group discussion. Sr Leena D’Costa BS the Amrat Karnataka Regional Coordinator welcomed the gathering. Sr Lovely DSS thanked the guests on the dais and Sr Freeda AC thanked the participants and the organizers of the programme. Sr Joel SRA, compeered the day’s schedule. There were 34 participants representing various Dioceses in Karnataka region were present. The breakfast and meals were provided on the occasion. The programme was winded at 2.00pm


ಅಮೃತ್ ಥಲಿತಾ ಕುಮ್ - ಭಾರತ, ಕರ್ನಾಟಕ ಪ್ರಾಂತ್ಯದ ಸಭೆ

ದಿನಾಂಕ 12.06.2023 ಅಮೃತ್ ಥಲಿತಾಕುಮ್ - ಭಾರತ, ಕರ್ನಾಟಕ ಪ್ರಾಂತ್ಯದ ಸಭೆಯನ್ನು ಕೆನರಾ ಆರ್ಗನೈಝೇಶನ್ ಫಾರ್ ಡೆವಲಪ್ಮೆಂಟ್ ಆ್ಯಂಡ್ ಪೀಸ್( ಸಿಒಡಿಪಿ) ನಂತೂರು, ಮಂಗಳೂರಿನಲ್ಲಿ ಭ| ಲೀನಾ ಡಿ ಕೋಸ್ಟ ಬಿಎಸ್ ಸಂಯೋಜಕರು ಮತ್ತು ಅವರ ತಂಡ ( ಅಮೃತ್ ಕರ್ನಾಟಕ ಪ್ರಾದೇಶಿಕ) ಸಭೆಯನ್ನು ಆಯೋಜಿಸಿದರು. ಮಂಗಳೂರಿನ ಶುಭದ ಸಂಸ್ಥೆಯ ಭ| ಅನ್ನಾ ಮರಿಯಾ ಮತ್ತು ಭ| ಹೆರಿಟಾ ಇವರ ಪ್ರಾರ್ಥನಾ ವಿಧಿಯೊಂದಿಗೆ ಸಮಯ 9.30 ಕ್ಕೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಅಮೃತ್ ಥಲಿತಾಕುಮ್ ಇಂಡಿಯಾದ ಅಧ್ಯಕ್ಷೆ ಭ| ಮೀರಾ ಮ್ಯಾಥಿವ್ ಆರ್ ಜಿ ಎಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಭ| ಶಾಂತಿ ಪ್ರಿಯಾ ಬಿಎಸ್ ಸಹಾಯಕ ಮಾಹಮಾತೆ ಬೆಥನಿ ಸಂಸ್ಥೆ, ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಎಲ್ಲರನ್ನು ಪ್ರೇರೆಪಿಸುತ್ತಾ ತಿಳಿಸಿದ್ದೇನೆಂದರೆ ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಾಗುವ ಹಲವಾರು ಸಮಸ್ಯೆಗಳನ್ನು ಎದುರಿಸಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಸತತವಾಗಿ ಶ್ರದ್ಧೆಯಿಂದ ದುಡಿಯ ಬೇಕೆಂದು ಇವರ ಉದ್ಘಾಟನಾ ಸಂದೇಶವನ್ನು ನೀಡಿದರು. ಭ| ಮೀರಾ ಇವರು ತಮ್ಮ ಅಧ್ಯಕ್ಷೀಯರ ಭಾಷಣದಲ್ಲಿ ಮಾನವ ಕಳ್ಳ ಸಾಗಣೆಯ ಅಸ್ತಿತ್ವದಲ್ಲಿರುವ ಸಮಸ್ಯೆ ಮತ್ತು ಪ್ರಪಂಚದಾದ್ಯಾಂತ ನಡೆಯುತ್ತಿರುವ ಪ್ರಸ್ತುತ ಸನ್ನಿವೇಶದ ಕುರಿತು ಮಾತನಾಡಿದರು.

ಅಮೃತ್ ಥಲಿತಾ ಕುಮ್- ಭಾರತದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರಾದ ಭ| ಅನ್ನಾ ಮರಿಯಾ ಬಿಎಸ್ ಅವರು ಬಾಲಕಾರ್ಮಿಕ ಪದ್ಧತಿ ವಿರುದ್ಧ ಅಂತರಾಷ್ಟ್ರೀಯ ದಿನದ ಮಹತ್ವದ ಕುರಿತು ಮಾತನಾಡಿದರು. ಉತ್ತರ ಕರ್ನಾಟಕದ ಬೀದರ್ ನ ಹುಮನಾಬಾದ್‍ನಲ್ಲಿ ಬಾಲಕಾರ್ಮಿಕ ಶಾಲೆಯನ್ನು ನಡೆಸುತ್ತಿರುವ ಅನುಭವವನ್ನು ಹಂಚಿಕೊಂಡರು. ಪ್ರಾದೇಶಿಕ ಕಾರ್ಯದರ್ಶಿ ಭ| ರಜನಿ ಎಸ್ ಆರ್ ಎ ಅವರು ಹಿಂದಿನ ಸಭೆಯ ನಡಾವಳಿಯನ್ನು ಪಿಪಿಟಿ ಮುಖಾಂತ ಪ್ರಸ್ತುತ ಪಡಿಸಿದರು. ಅರೈಸ್ ಫೌಂಡೇಶನ್ ಭಾರತದ ಸಂಯೋಜಕರಾದ ಭ| ಶೆರ್ಲಿ ಎಸ್ ಜೆ ಎಲ್ ಇವರು ಅರೈಸ್ ಫೌಂಡೇಶನ್ ನ ವಿವಿಧ ಕಾರ್ಯಕ್ರಮದ ಮಾಹಿತಿಗಳನ್ನು ಹಂಚಿಕೊಂಡರು. ಭಾರತದಾದ್ಯಂತ ಭಗಿನಿಯರ ಸಂಪರ್ಕವನ್ನು ಬಲಪಡಿಸುವ ಸಲುವಾಗಿ ಭಗಿನಿಯರಿಗಾಗಿ ಹಿಲ್ಟನ್ ಫಂಡ್ ಮತ್ತು ಅದರ ಧನಸಹಾಯಕ್ಕಾಗಿ ಆಯ್ದ ಪ್ರದೇಶಗಳ ಬಗ್ಗೆ ಭ| ಮೀರಾ ರವರು ವಿವರಿಸಿದರು.

ಕರ್ನಾಟಕದ ಬೇರೆ ಬೇರೆ ಧರ್ಮ ಪ್ರಾಂತ್ಯದ ಸಂಯೋಜಕರು ಮಾನವ ಸಾಗಾಣಿಕೆ ಕುರಿತಾದ ಮುಂದಿನ ಕಾರ್ಯಕ್ರಮದ ಕ್ರಿಯಾ ಯೋಜನೆಯನ್ನು ಗುಂಪು ಚಟುವಟಿಕೆಯ ಮೂಲಕ ನಡೆಸಿದರು. ಕಾರ್ಯಕ್ರಮದ ಸ್ವಾಗತ ಭ| ಲೀನಾ ಡಿ ಕೋಸ್ಟ, ಭ| ಲವ್ಲಿ ಡಿಎಸ್‍ಎಸ್ ಮತ್ತು ಭ| ಫ್ರೀಡಾ ಎಸಿ ಇವರು ಭಾಗವಹಿಸಿದವರಿಗೆ ಧನ್ಯವಾದವನ್ನು ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆ - ಭ| ಜೋಯಲ್ ಎಸ್ ಆರ್ ಎ . ಭ| ಲೀನಾ ಡಿಸೋಜಾ ಇವರ ದೇವರಿಗೆ ಕೃತಜ್ಞತೆ ಸಲ್ಲಿಸಿ ಮುಕ್ತಾಯ ಪ್ರ್ರಾರ್ಥನೆ ನೆರವೇರಿಸಿದರು. ಕರ್ನಾಟಕ ಪ್ರದೇಶದ ವಿವಿಧ ಧರ್ಮಪ್ರಾಂತ್ಯಗಳಿಂದ ಒಟ್ಟು 34 ಪ್ರತಿನಿಧಿಗಳು ಬಾಗವಹಿಸಿದ್ದರು.ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ ಸಮಯ 2.00 ಗಂಟೆಗೆ ಭೋಜನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by