ದಿನಾಂಕ 20.04.2023 ಮತ್ತು 21.04.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಶಕ್ತಿನಗರ, ಪ್ರೀತಿ ನಗರ ಮತ್ತು ಸಂಜಯ್ ನಗರ ಪರಿಸರದ ಮಕ್ಕಳಿಗೆ 2 ದಿನದ ಬೇಸಿಗೆ ಶಿಬಿರವನ್ನು ಪಾಯ ಸಭಾ ಭವನ ಸಂಜಯ್ ನಗರದಲ್ಲಿ ಹಮ್ಮಿಕೊಳ್ಳಲಾಯಿತು. ತಂದೆ ನೀ ನೀಡು ಬಾ ಎಂಬ ಪ್ರಾರ್ಥನಾ ಗೀತೆಯೊಂದಿಗೆ ಶಿಬಿರವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರು ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ|ಲೀನಾ ಡಿ ಕೋಸ್ಟ, ಅತಿಥಿಗಳಾಗಿ ಶ್ರೀಮತಿ ರಾಜೀವಿ ಮತ್ತು ಶ್ರೀಮತಿ ಸುಶೀಲ, ಸಹೋದಯ ಬೇಥನಿ ಸೇವಾ ಕೇಂದ್ರದ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ ಜಿ ಶೆಟ್ಟಿ ಮತ್ತು ಶ್ರೀಮತಿ ರೆನಿಲ್ಲಾ ರೊಶ್ನಿ, ಕು|ರಂಜಿನಿ ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳ ಸ್ವ ಪರಿಚಯದೊಂದಿಗೆ ಶಿಬಿರವನ್ನು ಆರಂಭಿಸಲಾಯಿತು. ಶ್ರೀಮತಿ ನಳಿನಿ ಇವರು ಮಕ್ಕಳಿಗೆ ಆಕಾಶ, ಭೂಮಿ, ಪಾತಾಳ ಎಂಬ ವ್ಯಾಯಮವನ್ನು ಮಾಡಿಸಿದರು. ನಂತರ ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ ಆ ಗುಂಪಿಗಳಿಗೆ ಒಂದು ಅರ್ಥಭರಿತವಾದ ಹೆಸರನ್ನು ನೀಡಿ ಗುಂಪು ಚಟುವಟಿಕೆಯನ್ನು ಮಾಡಿಸಲಾಯಿತು. ಶ್ರೀಮತಿ ರೋಶ್ನಿ ಇವರು ಆರೋಗ್ಯದ ಬಗ್ಗೆ ಹಾಗೂ ಶ್ರೀಮತಿ ನಳಿನಿ ಇವರು ಮೌಲ್ಯಗಳ ಬಗ್ಗೆ ಮಾಹಿತಿ ನೀಡಿದರು. ಭ| ಲೀನಾ ಇವರು ಮಕ್ಕಳಿಗೆ ನೀಡಿದ ಮಾಹಿತಿಗಳ ಮೌಲ್ಯ ಮಾಪನವನ್ನು ಮಾಡಿ ನಾಯಕತ್ವ ಅಂದರೆ ಒಂದು ಗುಂಪಿನಲ್ಲಿ ನಾಯಕನು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಹಾಗೂ ಚಪ್ಪಾಳೆ ತಟ್ಟಲು ನಮ್ಮ ಎರಡು ಕೈ ಎಷ್ಟ್ರು ಅಗತ್ಯವೊ ಅದೇ ರೀತಿ ಒಂದು ಗುಂಪಿನ ಸದಸ್ಯರಲ್ಲಿ ಒಗ್ಗಟ್ಟು, ಅನ್ಯೋನ್ಯತೆ ಇರುವುದು ಅಷ್ಟೇ ಮುಖ್ಯ ಹಾಗೆಯೇ ನಮ್ಮಲ್ಲಿ ಆತ್ಮ ಶಕ್ತಿ, ಒಳ್ಳೆಯ ನಡತೆ ಮತ್ತು ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ನಂತರ ಪಿಕ್ ಎಂಡ್ ಆ್ಯಕ್ಟ್, ಸಂಗೀತಾ ಕುರ್ಚಿ ಆಟಗಳನ್ನು ಆಡಿಸಿ ಭೋಜನದ ವಿರಾಮವನು ನೀಡಲಾಯಿತು. ನಂತರ ಮೊಬೈಲ್ ಬಳಕೆಯ ಉಪಯೋಗ ಮತ್ತು ಪರಿಣಾಮದ ಬಗ್ಗೆ ರೆನಿಲ್ಲಾ ರೋಶ್ನಿ ಇವರು ಮಾಹಿತಿ ನೀಡಿದರು. ರೋಶಿನಿ ನಿಲಯ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯರು ಮಕ್ಕಳಿಗೆ ಚಟುವಟಿಕೆಗಳ ಮುಖಾಂತರ ಆಟಗಳನ್ನಾಡಿಸಿ ಅಂದಿನ ಶಿಬಿರವನ್ನು ಮುಕ್ತಾಯಗೊಳಿಸಲಾಯಿತು.

ಶಿಬಿರದ ಎರಡನೇಯ ದಿನ ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ ನಾಯಕತ್ವದ ಕುರಿತು ಮಾಹಿತಿಯನ್ನು ನೀಡಲಾಯಿತು. ಮಕ್ಕಳಿಗೆ ವಾರ್ತಾ ಪತ್ರಿಕೆ ನೀಡಿ ಗುಂಪು ಚಟುವಟಿಕೆಯನ್ನು ಮಾಡಿಸಲಾಯಿತು. ನಂತರ ಸಮರೋಪ ಕಾರ್ಯಕ್ರಮಕ್ಕೆ ಮಕ್ಕಳಿಂದ ಸ್ವಾಗತ, ನಿರೂಪಣೆ ಧನ್ಯವಾದ, ಹಾಡು ಮೊದಲಾದವುಗಳನ್ನು ತಯಾರಿ ಮಾಡಲಾಯಿತು. ಶಿಬಿರದ ಕುರಿತು ಮಕ್ಕಳು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ನೀಡಿ ಶ್ರೀಮತಿ ನಳಿನಿ ಇವರ ಧನ್ಯವಾದದೊಂದಿಗೆ ಶಿಬಿರವನ್ನು ಮುಕ್ತಾಯಗೊಳಿಸಲಾಯಿತು.

 

 

 

 

 

 

 

 

 

 

 

 

Comments powered by CComment

Latest News

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by