ದಿನಾಂಕ 11.06.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಹಾಗೂ ಅರೈಸ್ ಫೌಂಡೇಶನ್ ಇವರ ಜಂಟಿ ಆಶ್ರಯದಲ್ಲಿ ಸಮುದಾಯ ಭವನ - ಪೊರ್ಕೋಡಿ ಇಲ್ಲಿ ಬಾಲ ಕಾರ್ಮಿಕತೆ ತಡೆ ದಿನ ಹಾಗೂ ಅಧಿಕೃತ ಭೇಟಿ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಅರೈಸ್ ಫೌಂಡೇಶನ್ ಸಂಸ್ಥೆ- ಭಾರತದ ಸಂಯೋಜಕರಾದ ಭ| ಶೆರ್ಲಿ ತಾಮಸ್ ಎಸ್ ಜೆ ಎಲ್ , ಅಮೃತ್ ತಲಿತಕುವi ಇಂಡಿಯಾ ಇದರ ಅಧ್ಯಕ್ಷರಾದ ಭ|ಮೀರಾ ಮ್ಯಾಥಿವ್ ಆರ್ ಜಿ ಎಸ್ , ಅಮೃತ್ ಕರ್ನಾಟಕ ಪ್ರಾಂತ್ಯದ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿರುವ ಭ| ಸೆಲಿನ್, ಸಹೋದಯ ಬೆಥನಿ ಸೇವಾ ಕೇಂದ್ರದ ಹಾಗೂ ಅಮೃತ್ ಕರ್ನಾಟಕ ಪ್ರಾಂತ್ಯದ ಸಂಯೋಜಕರಾದ ಭ| ಲೀನಾ ಡಿ ಕೊಸ್ಟ ಮೊದಲಾದವರು ಉಪಸ್ಥಿತರಿದ್ದರು. ಭ| ಶೆರ್ಲಿ ಇವರು ಮಹಿಳಾ ಗುಂಪಿನ ಸದಸ್ಯರೊಂದಿಗೆ ತಮ್ಮ ಸಂಸ್ಥೆಯು ನಡೆಸುತ್ತಿರುವ ಕೆಲಸ ಕಾರ್ಯಗಳ ಕುರಿತು ತಿಳಿಸಿ ತದನಂತರ ಮಹಿಳೆಯರೊಂದಿಗೆ ಮಾತನಾಡಿ ತಮ್ಮ ಸಂಸ್ಥೆಯ ವತಿಯಿಂದ ನೀಡಿದ ಪ್ರೋತ್ಸಾಹದಿಂದ ಅವರಿಗಾದ ಉಪಯೋಗಗಳ ಬಗ್ಗೆ ವಿಚಾರಣೆ ನಡೆಸಿದರು. ಅದಕ್ಕೆ ಮಹಿಳೆಯರು ವಿವಿಧ ಸ್ವ-ಉದ್ಯೋಗಳಾದ ಒಣ ಮೀನಿನ ಮಾರಾಟ, ಉಪ್ಪಿನ ಕಾಯಿ, ಟೈಲಂರಿಗ್, ಮೂಡೆ ತಯಾರಿಕೆ , ಹೂ - ತರಕಾರಿ ವ್ಯಾಪಾರ ನಡೆಸುತ್ತಿದ್ದು ಇದರಿಂದ ಮಹಿಳೆಯರು ತಮಗಾದ ಉಪಯೋಗಗಳನ್ನು ಅತೀವ ಸಂತೋಷದಿಂದ ವ್ಯಕ್ತ ಪಡಿಸುತ್ತಾ ತಿಳಿಸಿದರು ಅವರ ಕುಟುಂಬದಲ್ಲಿನ ಆರ್ಥಿಕ ಸುಧಾರಣೆ ಉತ್ತಮವಾಗಿದೆ ಮತ್ತು ಸ್ವಾವಲಂಬಿತರಾಗಿದ್ದಾವೆಂದು ಎಂದು ತಿಳಿಸಿ ಸದಸ್ಯರು ಭ| ಶೆರ್ಲಿ ರವರಿಗೆ ತಾವು ನೀಡಿದ ಸಣ್ಣ ಮಟ್ಟದ ವ್ಯಾಪಾರ ನಡೆಸಲು ನೀಡಿದ ಸಹಕಾರ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳನ್ನು ತಿಳಿಸಿದರು. ನಂತರ ಮಕ್ಕಳ ಪಾರ್ಲಿಮೆಂಟ್ ಇದರ ಸದಸ್ಯರೊಂದಿಗೆ ಸೇರಿ ಅದರಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾತನಾಡಿದರು ಈ ಕುರಿತು ಮಕ್ಕಳು ತಮ್ಮ ಕಲಿಕೆ, ಇತರ ಚಟುವಟಿಕೆಯಲ್ಲಿ ಭಾಗವಹಿಸಲು, ಉತ್ತಮವಾದ ಮಾಹಿತಿಗಳು ಈ ಸಂಘದಿಂದ ಪಡೆದುಕೊಂಡಿದ್ದೇವೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 

 

 

 

 

 

 

 

 

 

 

 

 

 

 

ಯಶಸ್ವಿನಿ ಮಕ್ಕಳ ಸಂಘದ ಮಕ್ಕಳು ಬಾಲ ಕಾರ್ಮಿಕತೆ ತಡೆ ದಿನದ ಅಂಗವಾಗಿ ಕಿರು ನಾಟಕ , ಹಾಡು ಮತ್ತು ನೃತ್ಯಗಳನ್ನು ಪ್ರದರ್ಶಿಸಿದರು. ಶ್ರೀಮತಿ ನಿರ್ಮಲ, ಕು| ಅಕ್ಷತಾ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯರು ಸಹೋದಯ ಸಂಸ್ಥೆಯು ನೀಡುತ್ತಿರುವ ಸೇವೆಯನ್ನು ಮೆಚ್ಚಿ ಹಾಗೂ ವೈಯಕ್ತಿಕವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅದರಿಂದ ತಾವು ಒಳ್ಳೆಯ ನಾಯಕತ್ವವನ್ನು ಮತ್ತು ಹಲವಾರು ಮೌಲ್ಯಗಳನ್ನು ಪಡೆದುಕೊಂಡಿದ್ದೇವೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಕೃತಜ್ಞತೆಯನ್ನು ಸಲ್ಲಿಸಿದರು. . ಈ ಕಾರ್ಯಕ್ರದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯರು, ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿ ಕೊಣಾಜೆ , ಹಿರಿಯರ ಮನೆಯ ಸಂಯೋಜಕಿ ಶ್ರೀಮತಿ ರೇಖಾ, ಕು| ರಾಕೇಶ್, ಶ್ರೀಮತಿ ಚಿನ್ನಮ್ಮ ಮೊದಲಾದವರು ಭಾಗವಹಿಸಿದರು. ಲಘು ಉಪಹಾರವನ್ನು ಸೇವಿಸಿ ಸಂತೋಷದಿಂದ ಮನೆಗೆ ತೆರಳಿದರು.

 

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by