ಅಂಜಲಿ ಗೊಣಬಾಳ ( ಪ್ರಥಮ ಸ್ಥಾನ )
7ನೇ ತರಗತಿ
ರೋಸಾ ಮಿಸ್ತಿಕಾ ಹಿ.ಪ್ರಾ.ಶಾಲೆ ಕಿನ್ನಿಕಂಬ್ಳ


ನಾನು ಅಂಜಲಿ ಗೊಣಬಾಳ,ಬೆಥನಿ ಆಡಳಿತಕ್ಕೊಳಪಟ್ಟ ರೋಸಾ ಮಿಸ್ತಿಕಾ ಹಿ.ಪ್ರಾ.ಶಾಲೆಯ 7ನೇ ತರಗತಿಯಲ್ಲಿ ಓದುತ್ತಿದ್ದೇನೆ.ಬೆಥನಿ ಸಂಶ್ಥೆಯವರು ನಡೆಸುವ ಕಲಿಕಾ ಸಾಮಥ್ರ್ಯ ಪರೀಕ್ಷೆಯಲ್ಲಿ ಮೊದಲಬಾರಿ ಭಾಗವಹಿಸಿ ಪ್ರಥಮ ಸ್ಥಾನ ಬಂದಿದ್ದೇನೆ ನನಗೆ ಪ್ರಥಮ ಸ್ಥಾನ ಬಂದಿರುವುದು ತುಂಭಾ ಸಂತೋಷವಾಗಿದೆ. ಈ ಪರೀಕ್ಷೆಯು ನನ್ನಲ್ಲಿ ಮುಂದಿನ ಪರೀಕ್ಷೆಗಳನ್ನು ಎದುರಿಸುವ ದೈರ್ಯ ಆಸಕ್ತಿ ಹಾಗೂ ಆತ್ಮ ವಿಶ್ವಾಸವನ್ನು ತುಂಬಿದೆ.

ನಾನು ಇನ್ನು ಮುಂದೆ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತಮ ಅಂಕಗಳನ್ನು ಪಡೆಯುತ್ತೇನೆ ಎಂಬ ಭರವಸೆಯಿದೆ ಮತ್ತು ಉನ್ನತ ಹುದ್ದೆಯಲ್ಲಿ ತೊಡಗುತ್ತೇನೆ ಎಂಬ ನಂಬಿಕೆಯಿದೆ. ನನ್ನ ಶಾಲಾ ಮುಖ್ಯ ಶಿಕ್ಷಕರಿಗೆ,ಕಲಿಸಿದ ಗುರುಗಳಿಗೆ, ಬೆಥನಿ ಆಡಳಿತ ಮಂಡಳಿಗೆ ಹಾಗೂ ಈ ಸಂಸ್ಥೆಗೆ ಸೇರಿಸಿದ ನನ್ನ ಹೆತ್ತವರಿಗೂ ಧನ್ಯವಾದಗಳನ್ನು ಹೇಳುತ್ತೇನೆ.ಮುಂದೆಯು ನನ್ನ ಶಾಲೆಗೆ ಒಳ್ಳೆಯ ಹೆಸರನ್ನು ತರುತ್ತೇನೆ.


 

ದೇವಿಕಾ (ಸಮಧಾನಕರ ಬಹುಮಾನ)
5ನೇ ತರಗತಿ
ಲಿಟ್ಲ್ ಫ್ಲವರ್ ಹಿ.ಪ್ರಾ.ಶಾಲೆ, ಕಿನ್ನಿಗೋಳಿಕಲಿಕಾ ಸ್ಪರ್ಧೆಯಲ್ಲಿ ಭಾಗವಹಿಸಿದ ಬಗ್ಗೆ ನನ್ನ ಅನಿಸಿಕೆ. ನನ್ನ ಹೆಸರು ಸೇವಿಕಾ. ಪ್ರಸ್ತುತ ನಾನು 5 ನೇ ತರಗತಿಯ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ,ಕಿನ್ನಿಗೋಳಿಯ ವಿದ್ಯಾರ್ಥಿನಿ. 2023-2024ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಹೋದಯ ಕಲಿಕಾ ಸಾಮಥ್ರ್ಯ ಸ್ಪರ್ಧಾ ಪರೀಕ್ಷೆಯು ನಮ್ಮ ಶಾಲೆಯಲ್ಲಿ ನಡೆಯಿತು. ಈ ಪರೀಕ್ಷೆಯಲ್ಲಿ ನಾನು 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯಲು ಮಾರ್ಗದರ್ಶನ ಮಾಡಿದಂತಹ ನನ್ನ ಶಾಲೆಯ ಮುಖ್ಯ ಗುರುಗಳಿಗೂ ಹಾಗೂ ಶಿಕ್ಷಕ ವೃಂದದವರಿಗೂ ನನ್ನ ಹೃದಯದಾಳದ ಧನ್ಯವಾದಗಳು.

ಸಹೋದಯ ಸಂಸ್ಥೆಯು ನಡೆಸುವ ಪರೀಕ್ಷೆ ನನ್ನಲ್ಲಿ ಸ್ಫೂರ್ತಿ ತುಂಬಿದೆ. ಪ್ರಸ್ತುತ ಯುಗ ಸ್ಫರ್ಧಾತ್ಮಕ ಯುಗವಾಗಿದ್ದು ಇಂದಿನ ಈ ಸ್ಪರ್ಧಾಯುಗದಲ್ಲಿ ಸಾಮಾನ್ಯ ಜ್ಞಾನವೆಂಬುದು ಅತ್ಯಂತ ಅವಶ್ಯಕ. ಕೇವಲ ಪಠ್ಯ ಪುಸ್ತಕದ ಪ್ರಶ್ನೆಗಳನ್ನು ಮಾತ್ರವೇ ಕಂಠಪಾಠ ಮಾಡಿದರೆ ಸಾಲದು. ಪಠ್ಯ ವಿಷಯದ ಆಳಕ್ಕೆ ತಲುಪಿ ನಮ್ಮ ಜ್ಞಾನವನ್ನು ಹೆಚ್ಚಿಸುವಲ್ಲಿ ನಮ್ಮ ಬೆಥನಿ ಸಂಸ್ಥೆ ನಡೆಸುವ ಈ ಕಲಿಕಾ ಸಾಮಥ್ರ್ಯದ ಪರೀಕ್ಷೆ ಅತ್ಯಂತ ಸಹಾಯವಾಗಿದೆ.

ಈ ವರ್ಷ ನಾನು ಓದಿದ ಪುಸ್ತಕಗಳಲ್ಲಿ ಬಹಳ ಆಸಕ್ತಿಯಿಂದ ಓದಿದ ಪುಸ್ತಕವೆಂದರೆ ಕಲಿಕಾ ಸಾಮಥ್ರ್ಯ ಪುಸ್ತಕ. ಈ ಅವಕಾಶವನ್ನು ಕೊಟ್ಟ ಬೆಥನಿ ಸಹೋದಯದ ವ್ಯವಸ್ಥಾಪಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ನನ್ನ ಅನಂತ ಧನ್ಯವಾದಗಳು.


 

ಕಾವೇರಿ ( ದ್ವಿತೀಯ ಸ್ಥಾನ)
7ನೇ ತರಗತಿ
ಲಿಟ್ಲ್ ಫ್ಲವರ್ ಹಿ.ಪ್ರಾ.ಶಾಲೆ, ಕಿನ್ನಿಗೋಳಿ

ಮಾನ್ಯರೇ ನಿಮಗೆ ನನ್ನ ಪ್ರಣಾಮಗಳು. ನನ್ನ ಹೆಸರು ಕಾವೇರಿ. ನಾನು 7ನೇ ತರಗತಿಯಲ್ಲಿ ಉತ್ತೀರ್ಣಳಾಗಿ 8ನೇ ತರಗತಿಗೆ ಸೇರಲಿದ್ದೇನೆ. ನನಗೆ ಕಲಿಕಾ ಸಾಮಥ್ರ್ಯ ಪರೀಕ್ಷೆ ಎಂದರೆ ತುಂಬಾ ಇಷ್ಟ ಹಾಗೂ ಅಭಿಮಾನ. ನಾನು 6ನೇ ತರಗತಿಲ್ಲಿ ಭಾಗವಹಿಸಿದ್ದೆನು. ಆದರೆ ಮೊದಮೊದಲು ಕಷ್ಟವೆನಿಸಿದ ಕಾರಣ ಹೆಚ್ಚು ಅಂಕಗಳಿಸಿರಲಿಲ್ಲ. ಆದರೆ ಇಂದು 7ನೇ ತರಗತಿಯಲ್ಲಿ ಕಲಿಕಾ ಸಾಮಥ್ರ್ಯದಲ್ಲಿ ಆಸಕ್ತಿ ಹೆಚ್ಚಿಸಿದೆನು. ಅದರ ಫಲವಾಗಿ ನಾನು ದ್ವಿತೀಯ ಸ್ಥಾನದಲ್ಲಿ ಯಶಸ್ವಿಯಾಗಿದ್ದೇನೆ. ಇದು ನನ್ನ ಕಲಿಕೆಯ ಪ್ರತಿಫಲವೇ ಹೌದು.
ನನ್ನನ್ನು ಕಲಿಕಾ ಸಾಮಥ್ರ್ಯದಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿದ ನಮ್ಮ ಶಾಲೆಯ ಇಡೀ ಶಿಕ್ಷಕ ವೃಂದಕ್ಕೆ ನನ್ನ ನಮನಗಳು ಹಾಗೂ ವಂದನೆಗಳು.


ಕಲಿಕಾ ಸಾಮಥ್ರ್ಯವು ಮಕ್ಕಳ ಕಲಿಕೆಯಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ. ಜ್ಞಾನ ಶಕ್ತಿ ಹೆಚ್ಚಿಸುತ್ತದೆ. ಈ ಕಲಿಕಾ ಸ್ಪರ್ಧೆಯಲ್ಲಿ ಸಾಮಾನ್ಯ ಜ್ಞಾನವಲ್ಲದೆ. ಪಠ್ಯ ಪುಸ್ತಕದ ವಿಷಯಗಳು ಇರುವುದರಿಂದ ಅನುದಿನದ ಪಾಠಗಳನ್ನು ಕಲಿಯಲು ಸುಳಭ ಆಗುತ್ತದೆ. ಅಷ್ಟೇ ಅಲ್ಲದೇ ನಮ್ಮ ಮುಂದಿನ ಜೀವನದಲ್ಲಿ ಅತೀ ಮುಖ್ಯ ಹಾಗೂ ನಮ್ಮ ಗುರಿಯನ್ನು ತಲುಪಲು ಅತೀ ಉಪಯುಕ್ತವಾಗಿದೆ. ನನ್ನ ತರಗತಿಯಲ್ಲಿ ಅನೇಕ ಮಕ್ಕಳಿಗೆ ಬಾಗವಹಿಸಲು ಇಚ್ಛಾ ಶಕ್ತಿಯಿದೆ. ನಮ್ಮ ಶಾಲೆಯಲ್ಲಿ 5,6,7 ನೇ ತರಗತಿಯ ಪ್ರತಿಯೊಬ್ಬರು ಭಾಗವಹಿಸಿದ್ದಾರೆ. ಇತರ ಶಾಲೆಗಳಲ್ಲೂ ಮಕ್ಕಳು ಭಾಗವಹಿಸಿದ್ದಾರೆ. ಅವರು ಚೆನ್ನಾಗಿ ಕಲಿತು ಒಳ್ಳೆಯ ಅಂಕಗಳನ್ನು ಗಳಿಸಿದ್ದಾರೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು.


ನನ್ನ ಶಾಲೆಯಲ್ಲಿ ನಗೆ ದ್ವಿತೀಯ ಸ್ಥಾನ ಬಂದದ್ದು ಬಹಳಷ್ಟು ಸಂತೋಷ. ಸಹೋದಯ ಸಂಸ್ಥೆಯು ಕೊಟ್ಟಿರುವ ಅವಕಾಶಕ್ಕಾಗಿ ನನನ್ ಅಂತರಾಳದ ಧನ್ಯವಾದಗಳು. ಇನ್ನೂ ಇಂತಹ ಸಂದರ್ಭಗಳು ಬಂದಲ್ಲಿ ನಾನು ಮತ್ತು ನನ್ನ ಸಹಪಾಠಿಗಳು ಭಾಗವಹಿಸಲು ಇಚ್ಛಿಸುತ್ತೇವೆ ಎಂದು ಹೇಳುತ್ತಾ ನನ್ನ ಈ ಚಿಕ್ಕ ಮನಸ್ಸಿನ ಅನಿಕೆಗೆ ಪೂರ್ಣವಿರಾಮ ಇಡುತ್ತೇನೆ.


ಕೀರ್ತನಾ ರಾಮಣ್ಣ ( ತೃತೀಯ ಸ್ಥಾನ )
5ನೇ ತರಗತಿ
ಸಂತ ಸೆಬಾಸ್ಟಿಯನ್ ಹಿ.ಪ್ರಾ.ಶಾಲೆ, ಬೆಂದೂರು


ಕಲಿಕಾ ಸಾಮಥ್ರ್ಯ ಪರೀಕ್ಷೆಯಿಂದ ನನಗೆ ಹಲವು ರೀತಿಯ ಅನುಕೂಲಗಳಾಗಿವೆ. ಕಲಿಕಾ ಸಾಮಥ್ರ್ಯ ಪುಸ್ತಕದಿಂದ ನಾನು ಅನೇಕ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಸಾಧ್ಯವಾಯಿತು. ಹೊಸ -ಹೊಸ ವಿಷಯಗಳ ಬಗ್ಗೆ ತಿಳಿಯಲು ಕಲಿಕಾ ಸಾಮಥ್ರ್ಯ ಪುಸ್ತಕವು ನೆರವಾಗಿದೆ. ಕಲಿಕಾ ಸಾಮಥ್ರ್ಯ ಪರೀಕ್ಷೆಯಿಂದ ನಾನು ಒಳ್ಳೆಯ ಮೌಲ್ಯಗಳನ್ನು ಕಲಿತೆ ಹಾಗೂ ಹಲವಾರು ವಿಚಾರಗಳನ್ನು ತಿಳಿದೆ. ನಾನು ಪ್ರತಿದಿನ ಕಲಿಕಾ ಸಾಮಥ್ರ್ಯ ಪುಸ್ತಕವನ್ನು ಓದುತ್ತಿದ್ದೆ. ಹಾಗೂ ಬಿಡುವಿನ ಸಮಯದಲ್ಲಿಯೂ ಪುಸ್ತಕವನ್ನು ಓದುತ್ತಿದ್ದೆ. ಇದರಿಂದಾಗಿ ನನಗೆ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಉತ್ತರಿಸಿ ತೃತೀಯ ಸ್ಥಾನವನ್ನು ಪಡೆಯಲು ಸಾಧ್ಯವಾಯಿತು. ಈ ಸಾಧನೆಗೆ ಕಾರಣರಾದ ತಮಗೂ ತುಂಬು ಹೃದಯದ ವಂದನೆಗಳನ್ನು ಸಲ್ಲಿಸುತ್ತೇನೆ.

 

 

 

 

 

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by