ಒಕ್ಕೂಟದ ವತಿಯಿಂದ ಮಹಿಳಾ ದಿನಾಚರಣೆಯನ್ನು ಪುಪ್ಪಲಯಲಯ ಸಭಾಂಗಣದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಥನಿ ಸಂಸ್ಥೆಯ ವiಹಾ ಮಾತೆಯ ಸಹಾಯಕಿ ಭ| ಲಿಲ್ಲಿಸ್‍ರವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಬಿ.ಎಂ. ರೋಹಿಣಿ ಹಾಗೂ ಮುಖ್ಯ ಅತಿಥಿಗಳಾಗಿ ಭ| ಮಾರಿಯೇಟ್ ಬಿ.ಎಸ್ ಮಹಾಮಾತೆಯ ಸಲಹೆದಾರರು ಭ| ಲಿಲ್ಲಿಟಾ ಬಿ.ಎಸ್ ಮಹಾಮಾತೆಯ ಸಲಹೆದಾರರು ಹಾಗೂ ಭ| ಸಂಧ್ಯಾ ಬಿ.ಎಸ್ ಮುಖ್ಯಸ್ಥೆ ಬೆಥನಿ ಕಾನ್ವೆಂಟ್ ಇವರು ವಹಿಸಿದರು. ಸಹೋದಯದ ಸಂಯೋಜಕರಾದ ಭ| ಮಿಶೆಲ್, ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ಸುನೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೊದಲಿಗೆ ಒಕ್ಕೂಟ ಸದಸ್ಯರಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಸಹೋದಯ ಸಂಸ್ಥೆಯ ಸಂಯೋಜಕರಾದ ಸಿಸ್ಟರ್ ಮಿಶೆಲ್‍ರವರು ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ಭ| ಲಿಲ್ಲಿಸ್‍ರವರು ಹಾಗೂ ಅತಿಥಿಗಣ್ಯರಿಂದ ಉದ್ಘಾಟಿಸಲಾಯಿತು. ಭ| ಲಿಲ್ಲಿಸ್‍ರವರು ಕಾರ್ಯಕ್ರಮದಲ್ಲಿ ಮಹಿಳೆಯರು ಹಲವಾರು ಶತಮಾನಗಳಿಂದ ಪುರುಷ ಪ್ರಧಾನ ವ್ಯವಸ್ಥೆಯಡಿಯಲ್ಲಿ ಸಿಲುಕಿ ನೊಂದಿದ್ದಾರೆ. ಅನೇಕ ಆಶಾಭಾವನೆಗಳನ್ನು ತಮ್ಮ ಹೃದಯದಲ್ಲಿಯೇ ಅದುಮಿಸಿಟ್ಟಿದ್ದಾರೆ. ಮಹಿಳೆಯರು ತಮ್ಮಆಶೋತ್ತರಗಳನ್ನು ನನಸಾಗುವಂತೆ ಮಾಡಲು ಹಾಗೂ ಅವರ ಶೋಷಿತ ಧ್ವನಿಗೆ ಮಾರುತ್ತರ ನೀಡಲು ಮಹಿಳೆಯರು ಸಶಕ್ತರಾಗಬೇಕು ಹಾಗೂ ಮಹಿಳೆ ಇತರ ಮಹಿಳೆಯರೊಂದಿಗೆ ಸೇರಿ ಸಂಘಟಿತರಾಗಿ ಅಭಿವೃದ್ಧಿ ಪಥದತ್ತ ಮುಂದಾದರೆ ಮಾತ್ರ ಅವಳು ಕಂಡ ಸಮಾನತೆಯ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಸಮಾಜದ ಜಾತಿ-ಧರ್ಮ ಪಂಥ ತಾರತಮ್ಯದ ಎಲ್ಲೆಯನ್ನು ಮೀರಿ ಮಾನವೀಯ ನವ ಸಮಾಜ ರೂಪಿಸಲು ನಾಂದಿಯಾಗಲಿ. ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ಸಶಕ್ತತೆಗೆ ಪ್ರೋತ್ಸಾಹಿಸಿ, ಅವರ ಅಭಿವೃದ್ಧಿಗೆ ಹುರಿದುಂಬಿಸಬೇಕು ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾದ ಬಿ.ಎಂ. ರೋಹಿಣಿಯವರು ಮಹಿಳೆಯರನ್ನು ಪರಿಪೂರ್ಣತೆಯ ಜೀವನಕ್ಕೆ ಮಾರ್ಗದರ್ಶನ ನೀಡಿ ಸರ್ವತೋಮುಖ ಅಭಿವೃದ್ಧಿಗೆ ಮಹಿಳೆಯರಾದ ನಾವೇ ಪ್ರಯತ್ನಿಸಬೇಕು. ಸಮಾಜದಲ್ಲಿ ಮಹಿಳೆಯರು ಹೇಗೆ ಸಶಕ್ತರಾಗಿ ಬೆಳೆಯಬೇಕು ಏನು ಮಾಡಬೇಕು ಇದರ ಬಗ್ಗೆ ಜಾಗೃತಿ ಮೂಡಿಸಿದರು. ಸ್ತ್ರೀ ಪುರುಷರನ್ನು ಸಾಮಾಜಿಕ ಬದಲಾವಣೆಗೆ ಪ್ರೇರೇಪಿಸುವ ಕೆಲಸವನ್ನು ಸಂಘಟಿತರಾಗಿ ನಾವು ಮಹಿಳೆಯರು ಮಾಡಬೇಕು ಎಂದರು.ರೋಹಿಣಿಯವರು ತಾವು ಬಾಲ್ಯದಿಂದ ಇಂದಿನವರೆಗಿನ ತನ್ನ ವೈಯಕ್ತಿಕ ಜೀವನದ ಅನುಭವಗಳನ್ನು ಹಂಚಿಕೊಂಡರು.

 

 

 

 

 

 

ಬೆಥನಿ ಸೇವಾ ಕೇಂದ್ರ ನಡೆಸಿದ 2015-2016 ಸಾಲಿನ ಸಹೋದಯ ಏರ್ಪಡಿಸಿದ ಕಲಿಕಾ ಸಾಮಥ್ರ್ಯ ಸ್ಪರ್ಧೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶ್ರೀಮತಿ ದುಲೈಕಾ ಶುಂಠಿಹಿತ್ಲು ಸಂಘದ ಸದಸ್ಯೆಯಾಗಿದ್ದು. ತನ್ನ ಗಂಡ ಹಾಗೂ 11 ಮಕ್ಕಳೊಂದಿಗೆ ಬೀಡಿ ಕಟ್ಟುತ್ತಾ ಜೀವನ ಸಾಗಿಸಿದರು.ಇವರು 8 ವರ್ಷಕ್ಕೆ ಮೊದಲು ಎಲ್ಲರೊಡನೆ ಒಂದು ಸಂಘವನ್ನು ಸ್ಥಾಪಿಸಿ ಅದಕ್ಕೆ ಕಿರಣಎಂದು ಹೆಸರನ್ನಿತ್ತು, ಕೆಲವೊಂದು ರೀತಿಯ ಸಮಸ್ಯೆಗಳು ಇದ್ದರೂ ಸಂಸ್ಥೆಯನ್ನು ಬಿಡದೆ ಸದಾ ಒಕ್ಕೂಟದ ಸಭೆಗೆ ಬರಲು ತೊಡಗಿದರು. ಜೀವನ ಜ್ಯೋತಿ ಸಂಘದಲ್ಲಿ ಜ್ಯೋತಿಯಾಗಿ ಬೆಳಗುತ್ತಾ ಎಲ್ಲರೊಡನೆ ಬೆರೆತು ತಾನು ಮುಸ್ಲಿಂ ಮಹಿಳೆ ಎಂ¨ ಭಾವನೆಯನ್ನು ತೊಲಗಿಸಿ ಎಲ್ಲಾ ಧರ್ಮದವರು ತಮ್ಮವರೇ ಎಂಬ ಭಾವನೆಯನ್ನು ಬಲಗೊಳಿಸಿದರು. ಶುಂಠಿಹಿತ್ಲುವಿನಿಂದ ಒಕ್ಕೂಟದ ಪ್ರತಿ ಮಾಸಿಕ ಸಭೆಗೆ ಬಂದು ಎಲ್ಲಾ ಚರ್ಚಾ ವಿಷಯಗಳಲ್ಲೂ ಭಾಗಿಯಾಗಿ ನಮ್ಮ ಒಕ್ಕೂಟದ ಹಿರಿಯ ಹಾಗೂ ಹೆಮ್ಮೆಯ ಮಹಿಳೆಯಾಗಿ ಪ್ರತಿ ಸದಸ್ಯೆಯರಿಗೂ ಮಾದರಿಯಾಗಿದ್ದಾರೆ ಎಂದು ಕಾರ್ಯಕರ್ತೆ ಶ್ರೀಮತಿ ನಳಿನಿ.ಜಿ. ಯವರು ಅಭಿಪ್ರಾಯ ವ್ಯಕ್ತ ಪಡಿಸಿದರು. ಇವರಿಗೆ ಸಹೋದಯ ಬೆಥನಿ ಸಂಸ್ಥೆ ಹಾಗೂ ಮಹಿಳಾ ಒಕ್ಕೂಟದ ಪರವಾಗಿ ಸನ್ಮಾನವನ್ನು ಮಾಡಲಾಯಿತು. ಒಕ್ಕೂಟದ ಮಹಿಳೆಯರಿಗೆ ಜಾನಪದ ಗೀತೆಯ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಹಾಗೂ ಕಾರ್ಯಕರ್ತೆಯರು ವಲಯ ಮಟ್ಟದಲ್ಲಿ ಸಂಘದ ಸದಸ್ಯೆಯ ಆಟೋಟ ಸ್ಪರ್ಧೆಯನ್ನು ನಡೆಸಿ ಅಥಿತಿಗಳ ಮೂಲಕ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.ಬೇರೆ ಬೇರೆ ಸಂಘದ ಸದಸ್ಯರು ತಮ್ಮಲ್ಲಿದ್ದ ಪ್ರತಿಭೆಯನ್ನು ನೃತ್ಯದ ಮೂಲಕ ಪ್ರದರ್ಶಿಸಿದರು. ಈ ಕಾರ್ಯಕ್ರಮದಲ್ಲಿ ಮಂಗಳ ಮುಖಿಯರು ಭಾಗವಹಿಸಿ ಸಮಾಜದಲ್ಲಿ ತಮಗೆ ಆಗುವ ತೊಂದರೆ ಹಾಗೂ  ಜನರು ಅವರೊಂದಿಗೆ ವ್ಯವಹರಿಸುವ ರೀತಿಯನ್ನು ನಾಟಕದ ಮೂಲಕ ಪ್ರದರ್ಶಿಸಿದರು. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಭ| ಮಿಶೆಲ್ ರವರು ಮಂಗಳಮುಖಿಯರಿಗೆ ಸಮಾಜದಲ್ಲಿ ತಮ್ಮದೇ ಆದ ಗೌರವ ಹಾಗೂ ಸ್ಥಾನಮಾನವನ್ನು ನೀಡಬೇಕು ಹಾಗೂ ಸಹೋದಯದಿಂದ ಎಲ್ಲಾ ರೀತಿಯ ಬೆಂಬಲ ಹಾಗೂ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.ಮಂಗಳ ಮುಖಿಯರ ಸಂಘ ಮಾಡುವ ಎಂದು ತಿಳಿಸಿದರು. ಒಕ್ಕೂಟ ಸಂಘದ ಸದಸ್ಯೆ ಪ್ರೇಮ.ಎಲ್. ಇವರ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by