Christmas Day celebration was held in Sahodaya Bethany Seva Kendra, Bendur on 22nd December 2022 . The program began with the lighting Diya by the Administrator Bethany Mother House Sr Shaila BS, Sr Leena DCosta the program coordinator, Mrs Prema the President of the federation, Mrs Sukanya the skill training instructor , Mrs Nalini Shetty the Social Worker.

A meaningful prayer service was conducted. Mrs Shobha welcomed all present there. Carol singing and dancing were presented to entertain everyone by the MSW and tailoring students. The Administrator in her message highlighted the importance of the day. A tribute was paid to our Founder the Servant of God Raymond FC Mascarenhas on his 62nd Death anniversary. Finally the entry of Christmas Papa brought joy to all. Vote of thanks was proposed by Nalini Shetty . Ms Ranjini compered the program .


ಕ್ರಿಸ್ ಮಸ್ ಸಹಮಿಲನ 2022

ದಿನಾಂಕ 22.12.2022 ರಂದು ಬೆಥನಿ ಸಮಾಜ ಸೇವಾ ಪ್ರತಿಷ್ಠಾನ(ರಿ) ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಮಂಗಳೂರು ವತಿಯಿಂದ ಸಹೋದಯ ಸಭಾಂಗಣದಲ್ಲಿ ಕ್ರಿಸ್ ಮಸ್ ಸಹಮಿಲನ 2022 ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಪ್ರಾರ್ಥನಾ ನೃತ್ಯದ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಭ| ಶೈಲಾ ಬಿ.ಎಸ್ ಬೆಥನಿ ಕಾನ್ವೆಂಟಿನ ಆಡಳಿತಾಧಿಕಾರಿ, ಭ| ಲೀನಾ ಡಿ’ಕೋಸ್ಟ ಸಂಯೋಜಕರು, ಶ್ರೀಮತಿ ಪ್ರೇಮ ಮಹಿಳಾ ಒಕ್ಕೂಟದ ಅಧ್ಯಕ್ಷೆ, ಶ್ರೀಮತಿ ಸುಕನ್ಯ ಹೊಲಿಗೆ ತರಬೇತಿಯ ಶಿಕ್ಷಕಿ ಮೊದಲಾದವರು ಉಪಸ್ಥಿತರಿದ್ದರು. ಯೇಸು ಕ್ರಿಸ್ತನ ಜನ್ಮದಿನದ ಸಂಭ್ರಮ ಹಾಗೂ ಬೆಥನಿ ಸಂಸ್ಥೆಯ ಸ್ಥಾಪಕರ ಅಂತಿಮ ಪಯಣದ 62 ನೇ ವರ್ಷದ ಸ್ಮರಣೆಯನ್ನು ಪ್ರಾರ್ಥನಾ ವಿಧಿಯ ಮೂಲಕ ದೀಪವನ್ನು ಬೆಳಗಿಸಿ ಸಂಸ್ಥಾಪಕರಿಗೆ ಹೂವಿನ ಹಾರವನ್ನು ಅರ್ಪಿಸಿ ಗೌರವಿಸಲಾಯಿತು. ಭ| ಲೀನಾ ಹಾಗೂ ಶ್ರೀಮತಿ ರೋಶನಿ ಇವರು ಪ್ರಾರ್ಥನಾ ವಿಧಿಯನ್ನು ನೆರವೇರಿಸಿ ಕೊಟ್ಟರು. ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತ ಭ| ಶೈಲಾ ಬಿ.ಎಸ್ ಇವರು ದೇವರು ಮನುಷ್ಯನಾಗಿ ಹುಟ್ಟುವುದು ಸುಖ-ದುಖಃ, ನೋವು-ನಲಿವನ್ನು ಅನಂದನುಭವಿಸಿ ಮನುಷ್ಯರೊಂದಿಗೆ ಬಾಳುವುದು ಪ್ರಕೃತಿಯ ನಿಯಮಗಳಿಗೆ ಸರಿಹೋಗುವುದು ಸುಲಭ ಕಾರ್ಯಗಳಲ್ಲ. ಆದರೆ ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲದ ಕಾರಣ ಇದು ಸಧ್ಯಾವಾಯಿತು.ಯೇಸು ಸ್ವಾಮಿಯ ಜನನವು ನಮ್ಮೆಲ್ಲರನ್ನು ಪಾಪದ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸುವ ದಾರಿ ದೀಪವಾಗಿದೆ. ಕ್ರಿಸ್‍ಮಸ್ ಹಬ್ಬವು ಕೇವಲ ಕ್ರಿಸ್ತ ಬಾಂಧವರೂ ಮಾತ್ರವಲ್ಲದೆ ಎಲ್ಲರೂ ಆಚರಿಸುವ ಹಬ್ಬವಾಗಿದೆ ಎಂದು ತಿಳಿಸುತ್ತಾ ಕ್ರಿಸ್ ಮಸ್ ಹಬ್ಬದ ಸಂದೇಶದ ಮೂಲಕ ಎಲ್ಲರಿಗೂ ಶುಭ ಹಾರೈಸಿದರು. ತದನಂತರ ಸಮಾಜ ಕಾರ್ಯವಿಭಾಗದ ವಿದ್ಯಾರ್ಥಿನಿಯರು ಹಾಗೂ ಹೊಲಿಗೆ ತರಬೇತಿಯ ವಿದ್ಯಾರ್ಥಿಗಳು ನೃತ್ಯ, ಹಾಡು, ಕಿರು ನಾಟಕದ ಮೂಲಕ ಮನೋರಂಜಿಸಿದರು. ಕ್ರಿಸ್ ಮಸ್ ಸಿಹಿಯನ್ನು ಹಂಚಿ ಮಧ್ಯಾಹ್ನದ ಭೋಜನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಕಾರ್ಯಕ್ರಮದ ನಿರೂಪಣೆ ಕು|ರಂಜಿನಿ, ಸ್ವಾಗತ ಶ್ರೀಮತಿ ಶೋಭಾ, ಧನ್ಯವಾದ ಶ್ರೀಮತಿ ನಳಿನಿ ಶೆಟ್ಟಿ. 

Comments powered by CComment

Latest News

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by