ದಿನಾಂಕ 23.12.2022 ರಂದು ಜೀವನ್‍ದಾರಾ ಸಮಾಜ ಸೇವಾ ಪ್ರತಿಷ್ಠಾನ(ರಿ) ಕುಲಶೇಖರ ಇವರ ವತಿಯಿಂದ ಸೆಕ್ರೆಡ್ ಹಾಟ್ರ್ಸ್ ಹೈಸ್ಕೂಲ್ ಶಾಲಾ ಸಭಾಂಗಣದಲ್ಲಿ ಕ್ರಿಸ್ ಮಸ್ ಸಹಮಿಲನ 2022 ಆಚರಿಸಲಾಯಿತು. ಪ್ರಾರ್ಥನಾ ವಿಧಿಯೊಂದಿಗೆ ದೀಪವನ್ನು ಬೆಳಗಿಸಿ ಕಾರ್ಯಮವನ್ನು ಆರಂಭಿಸಲಾಯಿತು. ಭ| ಸಿಸಿಲಿಯ ಮೆಂಡೊನ್ಸಾ ಬಿ.ಎಸ್ ಅಧ್ಯಕ್ಷರು ಜೀವನ್‍ದಾರಾ ಸಮಾಜ ಸೇವಾ ಪ್ರತಿಷ್ಠಾನ(ರಿ) ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕ್ರಿಸ್ ಮಸ್ ಸಂದೇಶವನ್ನು ನೀಡಿ ಎಲ್ಲರಿಗೂ ಶುಭ ಹಾರೈಸಿದರು. ನಂತರ ಕೇಕನ್ನು ಕತ್ತರಿಸಿ ಹಬ್ಬದ ಸಿಹಿಯನ್ನು ಹಂಚಲಾಯಿತು. ಸೆಕ್ರೆಡ್ ಹಾಟ್ರ್ಸ್ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಸಹೋದಯ ಸಂಸ್ಥೆ ಶುಭದಾ ಸಂಸ್ಥೆ ಹಾಗೂ ಸಹೋದಯ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಮನೋರಂಜನ ಕಾರ್ಯಮವನ್ನು ನೀಡಿದರು. ನಂತರ ಆಟೋಟ ಸ್ಫರ್ಧೆಯನ್ನು ನಡೆಸಿ ಬಹುಮಾನವನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಜೀವಿನಿ ಸಂಸ್ಥೆ ಕಿನ್ನಿಗೋಳಿ, ಶುಭದಾ ಸಂಸ್ಥೆ ಸುರಲ್ಪಾಡಿ, ಸಹೋದಯ ಸಂಸ್ಥೆ ಬೆಂದೂರ್ ಇಲ್ಲಿನ ಸಂಯೋಜಕರು ಹಾಗೂ ಸಿಬ್ಬಂದಿ ವರ್ಗ ಹಾಗೂ ಜೀವನ್‍ದಾರಾ ಹೊಲಿಗೆ ತರಬೇತಿಯ ವಿದ್ಯಾರ್ಥಿಗಳು ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಭ| ಐಡಾ ಜಾನೆಟ್ , ಸ್ವಾಗತ ಭ| ಅನ್ನಮರಿಯಾ, ಭೋಜನದ ಪ್ರಾರ್ಥನೆ ಭ| ಸುನಿತಾ ಡಿ ಸೋಜಾ, ಕು| ವಿನಿತಾ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

 

 

 

 

 

 

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by