ದಿನಾಂಕ 23.12.2023 ರಂದು ಬೆಥನಿ ಸಮಾಜ ಸೇವಾ ಪ್ರತಿಷ್ಠಾನ(ರಿ) ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಮಂಗಳೂರು ವತಿಯಿಂದ ಸಹೋದಯ ಸಭಾಂಗಣದಲ್ಲಿ ಕ್ರಿಸ್ ಮಸ್ ಸಹಮಿಲನ 2023 ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಮಹಾಮಾತೆ ಭ| ರೋಸ್ ಸೆಲಿನ್ ಬಿ.ಎಸ್ , ಭ| ಶಾಂತಿ ಪ್ರಿಯ ಬಿ.ಎಸ್ ಮಹಾಮಾತೆಯ ಪ್ರಥಮ ಸಲಹೆದಾರರು, ಬೆಥನಿ ಪ್ರತಿಷ್ಠಾನದ ಕಾರ್ಯದರ್ಶಿ/ ನಿರ್ದೇಶಕರು, ಬೆಥನಿ ಪ್ರತಿಷ್ಠಾನದ ಪದಾಧಿಕಾರಿಗಳಾದ ಭ| ಸಂತೋಷ್ ಮರಿಯಾ ಬಿ.ಎಸ್, ಭ| ಸಂಧ್ಯಾ ಬಿ.ಎಸ್, ಭ| ವೈಲೆಟ್ ಬಿ.ಎಸ್, ಬೆಥನಿ ಕಾನ್ವೆಂಟಿನ ಮುಖ್ಯಸ್ಥರಾದ ಭ| ಡೋನಾ ಬಿ.ಎಸ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜೀವನ್‍ಧಾರ ಮತ್ತು ಶುಭದಾ ಸಂಸ್ಥೆಯ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರ ಪ್ರಾರ್ಥನಾ ವಿಧಿಯೊಂದಿಗೆ ಬಾಲಾ ಯೇಸು ಸ್ವಾಮಿಯನ್ನು ಗೋದಲಿಯಲ್ಲಿ ಪ್ರತಿಷ್ಠಾಪಿಸಿ ಬೆಥನಿ ಸಂಸ್ಥೆಯ ಸಂಸ್ಥಾಪಕರಾದ ಫಾ| ಆರ್.ಎಫ್.ಸಿ ಮಸ್ಕರೇನ್ಹಸ್ ಇವರ 63ನೇ ಪುಣ್ಯ ಸ್ಮರರ್ಣಾಥವಾಗಿ ಅವರಿಗೆ ಹೂ ಹಾರವನ್ನು ಸಮರ್ಪಿಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ನಂತರ ಬಂದಂತಹ ಅತಿಥಿ ಗಣ್ಯರನ್ನು ಸಹೋದಯ ಸಂಸ್ಥೆಯ ಸಂಯೋಜಕರಾದ ಭ| ಲೀನಾ ಡಿ’ಕೋಸ್ಟ ಇವರು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಮಹಾಮಾತೆಯಾದ ಭ| ರೋಸ್ ಸೆಲಿನ್ ಇವರು ನಮ್ಮೊಳಗಿನ ಹೃದಯ ದೇಗುಲದಲ್ಲಿ ಪ್ರೀತಿ-ಜ್ಞಾನದ ಬಂಗಾರದ ಬೆಳಕು ಪಸರಿಸಲಿ ಬದುಕಿನ ಉದ್ದಕ್ಕೂ ಸಕಲ ಜೀವ ಚೈತನ್ಯಗಳಿಗೆ ವಾತ್ಸಲ್ಯದ ತಂಪಾದ ನೆರಳು ಲಭಿಸುವಂತಾಗಲಿ. ಭಾಷೆ,ಮತ ಪಂಥಗಳ ನೆಪದಲ್ಲಿ ಮುನಿಸಿಕೊಂಡ ಮನಸ್ಸುಗಳು ಶಾಂತವಾಗಲಿ ಲೋಕದ ಸಮಸ್ತ ಜೀವ ಕೋಟಿಯ ಮಧ್ಯೆ ಸಹೋದರ ಬಾಂಧವ್ಯ ಬೆಸೆಯುವಂತಾಗಿ ಈ ಹೊಸ ವರುಷವು ಎಲ್ಲರಿಗೂ ಒಳಿತನ್ನು ತರಲೆಂದು ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಶುಭವನ್ನು ಕೋರಿದರು. ತದನಂತರ ಸಂತ ಜೋಸೆಫ್ ಹಾಗೂ ಸಂತ ಸೆಬಾಸ್ಟಿಯನ್ ಶಾಲಾ ಮಕ್ಕಳು ಸ್ವಾಗತ ನೃತ್ಯ ಹಾಗೂ ಕ್ರಿಸ್ ಮಸ್ ಟ್ಯಾಬ್ಲೊವನ್ನು ಪ್ರದರ್ಶಿಸಿದರು, ಎಮ್.ಎಸ್ ಡಬ್ಲ್ಯೂ ವಿದ್ಯಾರ್ಥಿಗಳು ಹಾಗೂ ಹೊಲಿಗೆ ತರಬೇತಿಯ ವಿದ್ಯಾರ್ಥಿಗಳು ಹಾಡು,ನೃತ್ಯದ ಮೂಲಕ ಮನೊರಂಜಿಸಿದರು. ಕ್ರಿಸ್ ಮಸ್ ಹಬ್ಬದ ಉಡುಗೊರೆ ಹಾಗೂ ಸಿಹಿಯನ್ನು ಹಂಚುತ್ತಾ ಮಧ್ಯಾಹ್ನದ ಭೋಜನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಶೋಭಾ, ಧನ್ಯವಾದ ಸಮರ್ಪಣೆ ಶ್ರೀಮತಿ ರೆನಿಲ್ಲಾ ರೋಶನಿ. ಜೀವನ್‍ಧಾರ ಸಮಾಜ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಭ| ಅನ್ನಮರಿಯ ಬಿ.ಎಸ್ ಹಾಗೂ ಸಿಬ್ಬಂದಿ ವರ್ಗ, ಶುಭದಾ ಸಂಸ್ಥೆಯ ನಿರ್ದೇಶಕರಾದ ಭ| ಹೆರಿಟಾ ಬಿ.ಎಸ್ ಹಾಗೂ ಸಿಬ್ಬಂದಿ ವರ್ಗ ಹಾಗೂ ಬೆಥನಿ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿಯಾದ ಭ| ಜೆಸ್ಸಿ ಲೀನಾ ಬಿ.ಎಸ್ ಹಾಗೂ ಸಿಬ್ಬಂದಿ , ಬೆಥನಿ ಜನರಲೇಟ್ ಹಾಗೂ ಬೆಥನಿ ಕನ್ಯಾ ಮಠದ ಎಲ್ಲಾ ಭಗಿನಿಯರಿಗೂ, ಸಹೋದಯ ಬೆಥನಿ ಮಹಿಳಾ ಒಕ್ಕೂಟದ ಎಲ್ಲ ಸದಸ್ಯರಿಗೂ, ಹೊಲಿಗೆ ತರಬೇತಿ ಕೇಂದ್ರದ ಶಿಕ್ಷಕಿ ಹಾಗೂ ತರಬೇತಿದಾರರು ಮೊದಲಾದವರು ಭಾಗವಹಿಸಿದ್ದರು.

 

 

 

 

 

 

 

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by