ಸಹೋದಯ ಬೆಥನಿ ಸೇವಾ ಕೆಂದ್ರ ಬೆಂದೂರು, ಮಂಗಳೂರು ಹಾಗೂ ಅರೈಸ್ ಫೌಂಡೇಶನ್ ಇವರ ವತಿಯಿಂದ ದಿನಾಂಕ 21.07.2023 ರಂದು ಮುಲ್ಕಿ ಲಿಂಗಪ್ಪಯ್ಯ ಕಾಡು ದೀಪ, ಜನನಿ ಮತ್ತು ಆದರ್ಶಿನಿ ಸ್ವ-ಸಹಾಯ ಸಂಘದ ಸದಸ್ಯರಿಗೆ ವಿಶ್ವ ಮಾನವ ಕಳ್ಳ ಸಾಗಾಣಿಕೆ ತಡೆದಿನದ ಪ್ರಯುಕ್ತ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ತದನಂತರ ಭ|ಲೀನಾ ಡಿ’ಕೋಸ್ಟ (ಸಂಯೋಜಕರು ಸಹೋದಯ ಬೆಥನಿ ಸೇವಾ ಕೇಂದ್ರ) ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಾಣೆಕೆ ಅಂದರೇನು? ಸಾಮಾನ್ಯವಾಗಿ ಸಾಗಾಣಿಕೆಯನ್ನು ಯಾವೆಲ್ಲ ರೀತಿಯಲ್ಲಿ ನಡೆಸುತ್ತಾರೆ ಉದಾ: ಮೊಬೈಲ್, ಸಾಮಾಜಿಕ ಜಾಲತಾಣ ಮತ್ತು ಕೆಲಸದ ಆಮಿಷಾ ಒಡ್ಡಿ ಅಥವಾ ಸಣ್ಣ-ಪುಟ್ಟ ವಸ್ತುಗಳು, ಹಣದ ಆಸೆಯನ್ನು ಹುಟ್ಟಿಸಿ ಬೇರೆ ದೇಶಕ್ಕೆ ಕರೆದುಕೊಂಡು ಹೋಗಿ ಅವರನ್ನು ಬೇರೆ ಬೇರೆ ಜಾಲತಾಣಕ್ಕೆ ಸಿಲುಕಿಹಾಕುವುದು ಮೊದಲಾದವುಗಳಿಂದ ಈ ಸಾಗಾಣಿಕೆಯನ್ನು ನಡೆಸುತ್ತಾರೆ ಆದುದರಿಂದ ಹೆತ್ತವರು ತಮ್ಮ ಮಕ್ಕಳಿಗೆ ಆನ್‍ಲೈನ್ ತರಬೇತಿಗಳು ನಡೆಯುತ್ತಿರುವಾಗ ಮಕ್ಕಳೊಂದಿಗೆ ತಾವು ಕುಳಿತುಕೊಂಡು ಅವರೇನು ಮಾಡುತ್ತಿದ್ದಾರೆಂದು ತಿಳಿದುಕೊಳ್ಳುವುದು , ಶಾಲೆ ಅಥವಾ ಕಾಲೇಜುಗಳಿಗೆ ಕಳುಹಿಸುವಾಗ ಅವರು ಕಾಲೇಜುಗಳಲ್ಲಿ ಏನೆಲ್ಲ ಮಾಡುತ್ತಾರೆ ಎಂಬುದರ ಬಗ್ಗೆ ಸ್ವಲ್ಪ ಗಮನಹರಿಸುವುದು ಉತ್ತಮ ಎಂದು ಹಾಗೂ ನಾವಿದನ್ನು ಹೇಗೆ ತಡೆಗಟ್ಟಬಹುದೆಂಬುದರ ಬಗ್ಗೆ ಹಾಗೂ ಸಾಗಾಣಿಕೆಯಾಗುತ್ತಿದೆ ಎಂದು ತಮ್ಮ ಗಮನಕ್ಕೆ ಬಂದಲ್ಲಿ ತಮ್ಮ ಹತ್ತಿರದ ಅಂಗನವಾಡಿ ಕಾರ್ಯಕರ್ತೆರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಮತ್ತು ಹತ್ತಿರದ ಪೋಲೀಸ್ ಠಾಣೆ ಮೊದಲಾದವುಗಳನ್ನು ಸಂಪರ್ಕಿಸುವುದಾಗಿ ತಿಳಿಸಿದರು ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯಾದ ಶ್ರೀಮತಿ ರೆನಿಲ್ಲಾ ರೋಶನಿ ಇವರು ಭಾಗವಹಿಸಿದ್ದರು.

.

 

 

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by