ಪ್ರೇಮ ಮೂಲ್ಯ      
ಸಂಸ್ಥೆ : ಸಹೋದಯ
ಪ್ರಾಯ: 38 ವರ್ಷ
ಶೈಕ್ಷಣಿಕ ವಿವರ :ಹತ್ತನೇ ತರಗತಿ
ಸಂಘ: ಐಶ್ವರ್ಯ  ಸ್ವ-ಸಹಾಯ ಸಂಘ ಮಾಡಮೆ
ವೈವಾಹಿಕ ವಿವರ: ಇವರಿಗೆ ಒಬ್ಬ ಮಗನಿದ್ದಾನೆ. ಇವರ ಗಂಡ ಶಾಲೆಯಲ್ಲಿ ಪ್ರೆಸ್‍ನಲ್ಲಿ  ಕೆಲಸ ಮಾಡುತ್ತಿದ್ದಾರೆ.      

 

 

ಪ್ರೇಮರವರು ಸಹೋದಯ ಸಂಸ್ಥೆ ಪ್ರವರ್ತಿತ ಐಶ್ವರ್ಯ ಸಂಘದ ಸದಸ್ಯೆಯಾಗಿದ್ದು ಇವರಿಗೆ ಸಂಘದಿಂದ ಕೆಲವೊಂದು ತರಬೇತಿಗಳು ದೊರೆತಿದೆ. ಇವರು ಸ್ಕ್ರೀನ್ ಪ್ರಿಂಟಿಂಗ್ ತರಬೇತಿಯನ್ನು ಕಲಿತು ತನ್ನ ಮನೆಯಲ್ಲಿ ಇನ್ವಿಟೇಶನ್ ಪ್ರಿಂಟಿಂಗ್  ಕೆಲಸವನ್ನು ಮಾಡುತ್ತಿದ್ದರು. ಉಳಿದ ಸಮಯದಲ್ಲಿ ಬಟ್ಟೆಗಳನ್ನು ಹೊಲಿಯುತ್ತಿದ್ದರು. ಇದನ್ನು ಅಭಿವೃದ್ಧಿ ಪಡಿಸಲು ಸಂಚಿಯಿಂದ ಮೊದಲ ಬಾರಿಗೆ 50000/- ಸಾಲವನ್ನು ಪಡೆದುಕೊಂಡು. ತನ್ನ ಹಾಗೂ ನೆರೆಕರೆಯವರ ಬಟ್ಟೆಗಳನ್ನು ಹೊಲಿಯುತ್ತಿದ್ದರು. ಪ್ರೇಮರವರಿಗೆ ಮೊದಲೇ ಹೈನುಗಾರಿಕೆಯ ಬಗ್ಗೆ ಅನುಭವವಿದ್ದುದರಿಂದ ತನ್ನ ಮನೆಯಲ್ಲಿ ದನಗಳನ್ನು ಸಾಕತೊಡಗಿದರು. ಇದಕ್ಕಾಗಿ 2ನೇ ಬಾರಿಗೆ 50000/- ಸಾಲವನ್ನು ಪಡೆದುಕೊಂಡರು. ಹಾಲನ್ನು ತನ್ನ ನೆರೆಕರೆಯವರಿಗೆ ಮಾರಾಟ ಮಾಡುತ್ತಾರೆ. ಇವರಿಗೆ ಹೈನುಗಾರಿಕೆಯಲ್ಲಿ ಇವರ ತಾಯಿ ಸಹಕರಿಸುತ್ತಾರೆಂದು ಪ್ರೇಮರವರು ಹೇಳುತ್ತಾರೆ.     

ಪ್ರೇಮರವರು ಟೈಲರಿಂಗ್‍ಗೆ ಬೇಡಿಕೆ ಕಡಿಮೆಯಾದುದರಿಂದ  ಸಿದ್ಧಕಟ್ಟೆಯಲ್ಲಿ ಒಂದು ಸಣ್ಣ ಫ್ಯಾನ್ಸಿ ಅಂಗಡಿಯನ್ನು ಹಾಕಿದರು. ಅದರಿಂದ ಅಷ್ಟೇನು ಲಾಭ ಸಿಗದ ಕಾರಣ ಆ ಅಂಗಡಿಯನ್ನು ಮಾರಿದರು. ನಂತರ ತಮ್ಮ ನ ಸಹಕಾರದಿಂದ ಮಾಡಮೆಯ ಬಸ್ಸ್ ಸ್ಟ್ಯಾಂಡಿನ ಬದಿಯಲ್ಲಿಯೇ ಒಂದು ಫ್ಯಾನ್ಸಿ ಹಾಗೂ ಸ್ಟೇಷನರಿ ಅಂಡಿಯನ್ನು ಹಾಕಿದರು ಅ ಅಂಗಡಿಯಲ್ಲಿ ವಿವಿಧ ಬಗೆಯ ಪಾದರಕ್ಷೆ, ತಂಪು ಪಾನೀಯ ಮಕ್ಕಳ ಆಟಿಕೆಗಳು, ಸಿಹಿತಿಂಡಿಗಳು ಮುಂತಾದವುಗಳನ್ನು ಮಾರಾಟ ಮಾಡುತ್ತಿದ್ದರು. ಕಡಿಮೆ ದರದ ಪಾದರಕ್ಷೆಗೆ ಹೆಚ್ಚಿನ ಬೇಡಿಕೆ  ಇದೆ. ಇದರಿಂದಾಗಿ ಹೆಚ್ಚಿನ ಲಾಭ ದೊರೆಯುತ್ತಿದೆ ಇದಕ್ಕೆ ನನ್ನ  ಗಂಡನ ಸಹಕಾರವಿದೆಯೆಂದು ಪ್ರೇಮರವರು ಹೇಳುತ್ತಾರೆ.   

ಪ್ರೇಮರವರ ಉದ್ಯಮದಿಂದ ಮಗನ ವಿದ್ಯಾಭ್ಯಾಸಕ್ಕೆ ತುಂಬಾ ಸಹಕಾರವಾಗಿದೆ. ವೈಯಕ್ತಿಕವಾಗಿ ಅಭಿವೃದ್ಧಿ ಹೊಂದಿದ್ದೇನೆಂದು ಎನ್ನುತ್ತಾರೆ. ಪ್ರೇಮರವರಿಗೆ ಸಾಲ ಮರು ಪಾವತಿಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲವೆಂದು ಹೇಳುತ್ತಾರೆ. ಇವರು ಒಕ್ಕೂಟ ಸಭೆ ಹಾಗೂ ವಲಯ ಸಭೆಗಳಿಗೆ ತಪ್ಪದೆ ಹಾಜರಾಗುತ್ತಾರೆ. ಸಂಘದ ಸಭೆಯು ತಿಂಗಳಿಗೊಮ್ಮೆ ನಡೆಯುವುದು. ಸಂಘದಲ್ಲಿ ಕೋಶಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆಂದು ತಿಳಿಸಿದ್ದಾರೆ.    

ಸ್ವ-ಉದ್ಯೋಗ ಮಹಿಳೆಯರಿಗೆ ಒಳ್ಳೆಯದು ಸ್ವಾವಲಂಬಿಯಾಗಿ ಬದುಕಬಹುದೆಂದು ತಿಳಿಸಿದ್ದಾರೆ. ಇವರು ‘ಪೂಂಜ ಶ್ರೀ’ ಎಂಬ ಹೆಸರಿನಿಂದ ಮಾಡಮೆ ಪರಿಸರದಲ್ಲಿ ಗುರುತಿಸಿದ್ದಾರೆಂದು ತಿಳಿಸಿದ್ದಾರೆ.