ಮಾರ್ಚ್ 13, 2021 ರಂದು ಬೆಥನಿ ಸಮಾಜ ಸೇವಾ ಪ್ರತಿಷ್ಠಾನ (ರಿ) ಬೆಂದೂರು, ಮಂಗಳೂರು- ಇದರ ಒಂದು ಅಂಗ ಸಂಸ್ಥೆಯಾದ ಸಹೋದಯ ಬೆಥನಿ ಸೇವಾ ಕೇಂದ್ರ ಮತ್ತು ಬೆಥನಿ ಮಹಿಳಾ ಒಕ್ಕೂಟದ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. “ ಸವಾಲನ್ನು ಧೈರ್ಯದಿಂದ ಆಯ್ಕೆಮಾಡಿಕೊಳ್ಳೊಣ” ಎಂಬ ವಿಷಯವೇ ಆ ದಿನದ ಕಾರ್ಯಕ್ರಮ ಅಂತ್ಯವಾಗುವವರೆಗೂ ಪ್ರತಿಧ್ವನಿಸಿತು.

ಬೆಥನಿ ಸಂಸ್ಥೆಯ ಮಹಾಮಾತೆಯ ಸಲಹೆದಾರರಾದ ಭ| ಲಿಲ್ಲಿಸ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಿಳೆಯರು ಸವಾಲುಗಳನ್ನು ಎದುರಿಸುವಾಗ ಧೈರ್ಯದಿಂದ ಹೆಜ್ಜೆ ಇಡುವುದರಿಂದಾಗಿ ಅನೇಕ ಕುಟುಂಬಗಳು ಸುಭದ್ರತೆಯ ಭಾವನೆಯನ್ನು ಬೆಳೆಸಿಕೊಂಡಿವೆ . ಮಹಿಳೆಯರು ಚಾರಿತ್ರಿಕವಾಗಿಯೂ ರಾಜಕೀಯವಾಗಿಯೂ ಸಾವಲುಗಳನ್ನು ಮೆಟ್ಟಿನಿಂತ ಅನೇಕ ಉದಾಹರಣೆಗಳಿವೆ ಎಂದು ಕೆಲವು ಉದಾಹರಣೆಗಳ ಮೂಲಕ ವಿವರಿಸಿದರು.

ಬೆಥನಿ ಸಂಸ್ಥೆಯ ಮಹಾಮಾತೆಯ ಇನ್ನೊರ್ವ ಸಲಹೆದಾರರೂ, ಬೆಥನಿ ಸಾಮಾಜಿಕ , ಮೆಡಿಕಲ್ , ಪಾಸ್ಟಲರ್ ಅಪೋಸ್ಟಲೇಟ್ ಸಮಿತಿಯ ಹಾಗೂ ಸಹೋದಯ ಬೆಥನಿ ಸೇವಾ ಕೇಂದ್ರದ ನಿದೇರ್ಶಕರಾದ ಭ| ಶಾಂತಿಪ್ರಿಯಾ ಇವರು ದೀಪಬೆಳಗಿಸುವ ಮೂಲಕ ಕಾರ್ಯಕ್ರಕ್ಕೆ ಚಾಲನೆ ನೀಡಿದರು. ಅವರು ತಮ್ಮ ಬಾಷಣದಲ್ಲಿ ಅನೇಕ ಧೀರ ಸ್ತ್ರೀಯರ ಸಾಧನೆಗಳನ್ನು ಬಿಂಬಿಸಿ ಅವರ ಆದರ್ಶ ಜೀವನ ಮುಂದಿಟ್ಟು, ದಿಟ್ಟ ಹೆಜ್ಜೆಯಿಂದ ಕುಟುಂಬದ ಸಮಾಜದ ಪಂಥಾಹ್ವಾನಗಳಿಗೆ ಎದೆಯೊಡ್ಡಬೇಕು, ನೆಮ್ಮದಿ- ಶಾಂತಿಯಲ್ಲಿ ಬಾಳಲು ಯೋಗ್ಯವಾದ ಹೊಸ ಸಮಾಜ ರಚಿಸಲು ಪಣತೊಡಬೇಕೆಂದು ಮಹಿಳೆಯರನ್ನು ಹುರಿದುಂಬಿಸಿದರು.

ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಅಡಿಯಲ್ಲಿನ ಸಖೀ ಕೇಂದ್ರ ಲೇಡಿಗೋಶನ್ ಇಲ್ಲಿನ ಆಡಳಿತಾಧಿಕಾರಿಯಾದ ಶ್ರೀಮತಿ ಪ್ರಿಯ ಕೆ.ಸಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಷ್ಟದಲ್ಲಿರುವ , ತುರ್ತು ಪರಿಸ್ಥಿತಿ ಎದುರಿಸು ಮಹಿಳೆಯರಿಗೆ ಯಾವೆಲ್ಲಾ ಸೇವೆಗಳನ್ನು ಹೇಗೆ ‘ಸಖೀ’ ಕೇಂದ್ರದ ಮೂಲಕ ಪಡೆಯಬಹುದೆಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ವಿಶೇಷ ಅಂಶವೆಂದರೆ ಐವರು ಬೆಥನಿ ಭಗಿನಿಯರು ಹಾಗೂ ಶ್ರೀಮತಿ ಭಾಗಮ್ಮ , 12 ಅಂಗುಲ ಉದ್ದದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸಲು ದಾನ ಮಾಡಿದರು. ಶ್ರೀಮತಿ ಲಿನೆಟ್ ಗೋನ್ಸಾಲ್ವಿಸ್ ಸಿ.ಓ.ಡಿ.ಪಿ ಸಂಸ್ಥೆ ಕಾರ್ಯಕ್ರಮ ನಿರ್ವಾಹಕರ. ಕ್ಯಾನ್ಸರ್ ರೋಗ ನಿರ್ಮೂಲನೆ ಕಾರ್ಯದಲ್ಲಿ ತೊಡಗಿರುವ “ಸ್ಪರ್ಶ” ಸಂಸ್ಥೆಯ ಸಂಚಾಲಕಿ ಶ್ರೀಮತಿ ಶಿಲ್ಪಾ ಡಿ ಸೋಜಾ ಉಪಸ್ಥಿತರಿದ್ದರು.

ಪ್ರತಿ ವರ್ಷವು ಸಹೋದಯ ಸಂಸ್ಥೆಯು ನಡೆಸುವ ಸಹೋದಯ ಕಲಿಕಾ ಸಾಮಥ್ರ್ಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಕಿನ್ನಿಗೋಳಿ ಲಿಟ್ಲ್‍ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಕು| ಶರಣ್ಯ ಮತ್ತು ಕಿನ್ನಿಕಂಬ್ಳ ರೋಸಾಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಯ ಕು| ಮೆವರಿಶ್ ಹಾಗೂ ಬಜ್ಪೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಕು| ಶ್ರೇಯ ಇವರಿಗೆ ಸಹಾಯ ಧನ ಮತ್ತು ಕಾಣಿಕೆ , ಸರ್ಟಿಫಿಕೇಟ್ ನೀಡಲಾಯಿತು. ಮಹಿಳೆಯರಿಗೆ ಆಟಗಳನ್ನಾಡಿಸಿ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಶುಭದಾ , ಜೀವನ್‍ದಾರಾ , ಡೀಡ್ಸ್, ಬಿ.ಇ.ಎಸ್, ಸಂಸ್ಥೆ ಹಾಗೆಯೇ ಬೆಥನಿ ಜನ್‍ರಲೇಟ್ ಮತ್ತು ಕಾನ್ವೆಂಟಿನ ಎಲ್ಲಾ ಭಗಿನಿಯರಿಗೂ, ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು. ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ’ ಕೋಸ್ತ ಇವರು ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆ ಕು|ಐರಲ್ ಡಿ ಸೋಜಾ ಬೆಥನಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.