ದಿನಾಂಕ 30.01.2021 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ವಲಸಿಗರಿಗೆ ಹಾಗೂ ಗೃಹಕಾರ್ಮಿಕರಿಗೆ ಯುವತಿಯರಿಗೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ’ಕೋಸ್ತ , ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ನಳಿನಿ ಶೆಟ್ಟಿ (ಕಾರ್ಯಕರ್ತೆ), ಕು| ಐರಲ್, ಕು| ರಂಜಿನಿ , ಬಿ.ಎಸ್.ಬ್ಲ್ಯೂ ವಿದ್ಯಾರ್ಥಿನಿಯಾದ ಭ| ಅಮೃತ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೇವರ ಸ್ತುತಿಯೊಂದಿಗೆ ಆರಂಭಿಸಲಾಯಿತು. ನಂತರ ಕೆಲವೊಂದು ಮೌಲ್ಯಾಧಾರಿತ ಆಟಗಳನ್ನು ಆಡಿಸಲಾಯಿತು. ತದನಂತರ ಶ್ರೀಮತಿ ನಳಿನಿಯವರು ಹದಿಹರೆಯದಲ್ಲಾಗುವ ಸಮಸ್ಯೆಗಳ ಬಗ್ಗೆ ಹಾಗೂ ದೈಹಿಕ ಸ್ವಚ್ಛತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಆಟೋಟ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಭ| ಅಮೃತ ಇವರು ಧನ್ಯವಾದ ಸಮರ್ಪಿಸಿದರು ಮಧ್ಯಾಹ್ನದ ಭೋಜನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by