ದಿನಾಂಕ 14.09.2022 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಮಂಗಳೂರು ಇದರ ವತಿಯಿಂದ ಪೊರ್ಕೋಡಿ ಸಮುದಾಯ ಭವನದಲ್ಲಿ ನಡೆಯುತ್ತಿರುವ ಹೊಲಿಗೆ ತರಬೇತಿ ಕೇಂದ್ರದ ತರಬೇತಿದಾರರಿಗೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಯೋಜಕರಾದ ಭ| ಲೀನಾ ಡಿ ಕೋಸ್ಟ, ಸಂತ ಸೆಬಾಸ್ಟಿಯನ್ ಚರ್ಚ್ ಬೆಂದೂರು ಇಲ್ಲಿನ ಮಹಿಳಾ ಆಯೋಗದ ಸದಸ್ಯರಾದ ಶ್ರೀಮತಿ ಜೆನಿಫರ್, ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯಾದ ಶ್ರೀಮತಿ ನಳಿನಿ, ಹೊಲಿಗೆ ತರಬೇತಿ ಶಿಕ್ಷಕಿ ಕು| ಫರ್ಝಾನ ಮೊದಲಾದವರು ಉಪಸ್ಥಿತರಿದ್ದರು. ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ನಂತರ ಭ| ಲೀನಾ ಇವರು ಮಾನವ ಕಳ್ಳ ಸಾಗಾಣಿಕೆಯ ಕುರಿತಾದ ಮಾಹಿತಿಯನ್ನು ನೀಡುತ್ತಾ ಹೆಣ್ಣು ಮಕ್ಕಳನ್ನು ಈ ಸಾಗಾಟ ಪ್ರಕ್ರೀಯೆಯಲ್ಲಿ ಯಾವೆಲ್ಲಾ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ ಇದರ ಉದ್ದೇಶ ಮತ್ತು ಇದರಿಂದಾಗುವ ಪರಿಣಾಮಗಳು ಏನೆಂಬುದನ್ನು ಸಣ್ಣ ವಿಡಿಯೋ ಚಿತ್ರಣದ ವೀಕ್ಷಣೆಯ ಮೂಲಕ ಮಾಹಿತಿ ನೀಡಿದರು. ನಂತರ ತರಬೇತಿದಾರರಿಗೆ ಎಲ್ಲಾರು ಸತತವಾಗಿ ತರಬೇತಿಗೆ ಬಂದು ಚೆನ್ನಾಗಿ ಕಲಿತು ಬಟ್ಟೆಗಳನ್ನು ಹೊಲಿದು ಸ್ವಾವಲಂಬಿಯಾಗುವಂತೆ ಹಾಗಯೇ ಇತತರಿಗೂ ಮಾರ್ಗದರ್ಶನವನ್ನು ನೀಡಬೇಕೆಂದು ಶುಭ ಹಾರೈಸಿದರು. ಸ್ವಾಗತ ಕು| ಅಬಿಬಾ, ಶ್ರೀಮತಿ ನಳಿನಿ ಇವರ ಧನ್ಯವಾದೊಂದಿಗೆ ಲಫು ಉಪಹಾರವನ್ನು ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.