ದಿನಾಂಕ 26.08.2022 ಮತ್ತು 27.08.2022 ರಂದು ಸಹೋದಯ ಸಭಾಂಗಣದಲ್ಲಿ ಎಫ್ ವಿ ಟಿ ಆರ್ ಎಸ್ ಸಂಸ್ಥೆಯ ವತಿಯಿಂದ ಮಹಿಳಾ ಸ್ವ ಉದ್ಯೋಗಿಗಳಿಗೆ ಎರಡನೇ ಹಂತದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. FVTRS ಸಂಸ್ಥೆಯ ಶ್ರೀ ಲತೀಶ್, ಶ್ರೀ ನಿತೀನ್, ಶ್ರೀಮತಿ ಕ್ಲಾರ, ಶ್ರೀ ಸೂರ್ಯನಾರಾಯಣ ಮೊದಲಾದವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹಣ ಸಾಕ್ಷಾರತೆ , ಪಿಂಚಣಿ ಲೋನ್, ಕೆಲಸದ ಆಧಾರ, ಆದಾಯ ಮೇಲಿನ ಖರ್ಚು ವೆಚ್ಚ ಹಾಗೂ ಸಣ್ಣ ಅವಧಿಯ ಉಳಿತಾಯ ಎ.ಪಿ.ಎಂ.ಪಿ ಯೋಜನೆಯ ಕುರಿತು ತಿಳಿಸಲಾಯಿತು. ತದನಂತರ ಮಾರ್ಕೆಟ್ ನಿರತ ಆದಾಯ ಉತ್ಪಾದನಾ ವಲಯ, ಸೇವಾ ವಲಯ, ಸಗಟು ಮಾರಾಟ, ಚಿಲ್ಲರೆ ಮಾರಾಟದ ಮೂಲಕ ಹಾಗೆಯೇ ತಾವು ತಯಾರಿಸುವ ಅಥವಾ ಮಾರಾಟ ಮಾಡುವ ಉತ್ಪನ್ನಗಳಿಗೆ ಹೆಸರು ಕೊಡಬೇಕು ಆ ಹೆಸರು ತಮ್ಮ ಉತ್ಪನ್ನಕ್ಕೆ ಪೂಕವಾಗಿಯು ಮತ್ತು ಬ್ರಾಂಡ್, ಲೋಗೋ ಮುಖಾಂತರ ನಾವು ಉತ್ಪಾದಿಸುವ ಉತ್ಪನ್ನಗಳನ್ನು ಗುರುತಿಸುವ ಹಾಗೆ ಮಾಡಬಹುದೆಂದು ತಿಳಿಸಿದರು. ನಂತರ ಸಿಂಗಲ್ ಕಾಲಾಂ ಕ್ಯಾಶ್ ಬುಕ್,ಡಬ್ಬಲ್ ಕಾಲಾಂ ಕ್ಯಾಶ್ ಬುಕ್, ತ್ರಿಬಲ್ ಕಾಲಾಂ ಕ್ಯಾಶ್ ಬುಕ್ ಹಾಗೂ ಪೆಟ್ಟಿ ಕ್ಯಾಶ್ ( ಸಣ್ಣ ನಗದು ಪುಸ್ತಕ) ಈ ನಾಲ್ಕು ರೀತಿಯ ನಗದು ಪುಸ್ತಕಗಳ ಬಗ್ಗೆ ವಿವರಣೆಯನ್ನು ನೀಡಿ ಅದರಲ್ಲಿ ಪೆಟ್ಟಿ ನಗದು ಪುಸ್ತಕದಲ್ಲಿ ಸ್ವ ಉದ್ಯೋಗ ನಡೆಸುತ್ತಿರುವ ಲಾಭಾಂಶ, ವೆಚ್ಚ ಮೊದಲಾದವುಗಳನ್ನು ಬರೆದಿಡುವಂತೆ ತಿಳಿಸಿದರು. ಈ ರೀತಿಯ ಸ್ವ ಉದ್ಯೋಗವನ್ನು ನಡೆಸಲು ಮೊದಲು ನಮ್ಮಲ್ಲಿ ಛಲವಿರಬೇಕು ಬೆಳವಣಿಗೆ ಕಠಿಣವಾಗಿರುತ್ತದೆ ಆದರೆ ಮನಸ್ಸು, ಆಲೋಚನೆ, ಸಮಯ ಪ್ರಜ್ಞೆ ಈ ಎಲ್ಲ ಅಂಶಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ಸ್ವ-ಉದ್ಯೋಗಿಯಾಗಬಹುದೆಂದು ತಿಳಿಸಿದರು. ನಂತರ ಚಾಹಾ ಮಾರಾಟ ಎಂಬ ಉದಾಗರಣೆಯ ಮುಖಾಂತರ ಸದಸ್ಯರನ್ನು 3 ಗುಂಪುಗಳಾಗಿ ಮಾಡಿ ಗುಂಪು ಚಟುವಟಿಕೆಯನ್ನು ನಡೆಸಲಾಯಿತು. ಸ್ವಾಗತ ಶ್ರೀಮತಿ ಸಂಧ್ಯಾ, ಶ್ರೀಮತಿ ನಳಿನಿ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

 

 

 

 

 

 

 

Comments powered by CComment

Latest News

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by