ದಿನಾಂಕ 24.07.2022ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಮಂಗಳೂರು ಇವರ ವತಿಯಿಂದ ಯೇಸುರಾಯರ ದೇವಾಲಯ ವೇಣೂರು ಇಲ್ಲಿನ ಸ್ತ್ರೀ ಸಂಘಟನೆಯ ಮತ್ತು ಮಹಿಳಾ ಆಯೋಗದ ಸದಸ್ಯರಿಗೆ ಮಾನವ ಕಳ್ಳ ಸಾಗಾಣಿಕೆ ತಡೆ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ ಕೋಸ್ಟ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಹಿಳೆಯರಿಗೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಮಾನವ ಕಳ್ಳ ಸಾಗಾಣಿಕೆ ಎಂದರೇನು? ಇದರ ಪರಿಣಾಮವಾಗಿ ಮಹಿಳೆ ಮತ್ತು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ , ಸಾಗಾಣಿಕೆದಾರರು ನೀಡುವ ಸುಳ್ಳು ಭರವಸೆಗಳಿಂದ ತಮ್ಮನ್ನು ಯಾವ ರೀತಿಯಲ್ಲಿ ಎಚ್ಚೆತ್ತಿಕೊಳ್ಳಬೇಕೆಂಬುದರ ಬಗ್ಗೆ ಸಣ್ಣ ವಿಡಿಯೋ ಚಿತ್ರಣದ ಮೂಲಕ ಹಾಗೂ ಅದರೊಂದಿಗೆ ಸ್ವ-ಸಹಾಯ ಸಂಘದ ರಚನೆ ಮತ್ತು ಅದರ ಪ್ರಾಮುಖ್ಯತೆಯ ಹಾಗೂ ಸ್ವಾವಲಂಬಿತ ಜೀವನವನ್ನು ನಡೆಸುವ ಕುರಿತಾದ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮದಲ್ಲಿ ವ| ಫಾದರ್ ಪೀಟರ್ ಅರನ್ಹಾ ಧರ್ಮಕೇಂದ್ರ ಗುರುಗಳು, ಶ್ರೀ ಸ್ಟಿವನ್ ಡಿಕುನ್ಹ ಚರ್ಚಿನ ಪಾಲನ ಪರಿಷದ್ದಿನ ಕಾರ್ಯದರ್ಶಿ, ಶ್ರೀ ಎಡ್ವಡ್ ರೇಗೊ ಚರ್ಚಿನ 21-ಆಯೋಗದ ಸಂಯೋಜಕರು, ಶ್ರೀಮತಿ ಜೆತ್ರೂಡ್ ಡಿ ಸೋಜಾ ಮಹಿಳಾ ಸಂಘಟನೆಯ ಅಧ್ಯಕ್ಷರು, ಶ್ರೀಮತಿ ಸುಮಿತ ಮೊಂತೇರೊ ಮಹಿಳಾ ಸಂಘಟನೆಯ ಕಾರ್ಯದರ್ಶಿ, ಶ್ರೀಮತಿ ವಿಲ್ಮಾ ಕ್ರಾಸ್ತ ಮಹಿಳಾ ಆಯೋಗದ ಸಂಚಾಲಕಿ , ಭ| ವೀಣಾ ಅರನ್ಹ, ಭ| ಶಾರಲ್ ಮೊದಲಾದವರು ಉಪಸ್ಥಿತರಿದ್ದರು.