ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಮಂಗಳೂರು ಇವರ ವತಿಯಿಂದ ಧರ್ಮಜ್ಯೋತಿ ಸೇವಾ ಕೇಂದ್ರ ವಾಮಂಜೂರು ಇಲ್ಲಿನ ಸೌರ್ಹಾದ ಮಹಿಳಾ ಒಕ್ಕೂಟದ ಸದಸ್ಯರಿಗೆ ಮಾನವ ಕಳ್ಳ ಸಾಗಾಣಿಕೆ ತಡೆ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ|ಲೀನಾ ಡಿಕೊಸ್ಟ, ಧರ್ಮಜ್ಯೋತಿ ಸಂಸ್ಥೆಯ ಸಂಯೋಜಕರಾದ ಭ| ಜೋಯಲ್, ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ, ಶ್ರೀಮತಿ ಅಶ್ವಿನಿ,ಕು| ರಂಜಿನಿ ಮೊದಲಾದವರು ಉಪಸ್ಥಿತರಿದ್ದರು. ಭ|ಲೀನಾ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಹಿಳೆಯರಿಗೆ ಇತ್ತೀಚಿನ ದಿನಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ಎಂದರೇನು? ಈ ಕೃತ್ಯಕ್ಕೆ ಯಾವ ರೀತಿಯಲ್ಲಿ ಜನರನ್ನು ಬಳಸಿಕೊಳ್ಳುತ್ತಾರೆ, ಇದರಿಂದಾಗುವ ಪರಿಣಾಮಗಳು ಹಾಗೂ ಈ ಸಮಸ್ಯೆಯನ್ನು ಯಾವ ರೀತಿ ತಡೆಯ ಬಹುದೆಂಬುದನ್ನು ಸಣ್ಣ ವಿಡಿಯೋ ಚಿತ್ರಣದ ಮೂಲಕ ಮಾಹಿತಿ ನೀಡಿದರು.

 

 

 

 

Comments powered by CComment

Latest News

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by