ದಿನಾಂಕ 23.07.2022 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಮಂಗಳೂರು ಇವರ ವತಿಯಿಂದ ಧರ್ಮಜ್ಯೋತಿ ಸೇವಾ ಕೇಂದ್ರ ವಾಮಂಜೂರು ಇಲ್ಲಿನ ವಿದ್ಯಾಜ್ಯೋತಿ ಪ್ರೌಢ ಶಾಲೆಯ 8, 9, 10ನೇ ತರಗತಿಯ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಮಾನವ ಕಳ್ಳ ಸಾಗಾಣಿಕೆ ತಡೆ ದಿನದ ಪ್ರಯುಕ್ತ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ|ಲೀನಾ ಡಿಕೊಸ್ಟ, ಧರ್ಮಜ್ಯೋತಿ ಸಂಸ್ಥೆಯ ಸಂಯೋಜಕರಾದ ಭ| ಜೋಯಲ್, ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ, ಶ್ರೀಮತಿ ಅಶ್ವಿನಿ, ಕು| ರಂಜಿನಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭ| ಲೀನಾ ಇವರು ಹೆಣ್ಣು ಮಕ್ಕಳಿಗೆ ಮಾನವ ಕಳ್ಳ ಸಾಗಾಣಿಕೆ ಎಂದರೇನು? ಹಾಗೂ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಈ ಹೀನಾಕೃತ್ಯ ಇದರ ಪರಿಣಾಮವಾಗಿ ಮಹಿಳೆ ಮತ್ತು ಮಕ್ಕಳಿಗೆ ಅಸುರಕ್ಷಿತ ವಾತಾವರಣ ಸೃಷ್ಠಿಯಾಗಿದ್ದು ಕೋವಿಡ್ ಸಮಯದಲ್ಲೂ ಅದರ ನಂತರವು ಅನೇಕ ಮಕ್ಕಳು, ಮಹಿಳೆಯರು ಅಥಿಕ ಸಂಖ್ಯೆಯಲ್ಲಿ ಕಾಣಿಯಾಗಿರುವ ಬಗ್ಗೆ ಹಾಗೂ ಇದರಿಂದಾಗಿ ಇನ್ನು ಮುಂದೆ ಹೇಗೆ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಬುಹುದೆಂಬುದನ್ನು ಸಣ್ಣ ವಿಡಿಯೋ ಚಿತ್ರಣದ ಮೂಲಕ ಮಾಹಿತಿ ನೀಡಿದರು. ಹಾಗೂ ಶ್ರೀಮತಿ ನಳಿನಿ ಇವರು ಗಂಡು ಮಕ್ಕಳಿಗೆ ಮಾದಕ ವ್ಯಸನ ಸೇವನೆಯಿಂದಾಗುವ ದುಷ್ಪರಿಣಾಮಗಳು ಹಾಗೂ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಮಕ್ಕಳ ಸಾಗಾಣಿಕೆ ಸಮಸ್ಯೆಗಳ ಬಗ್ಗೆ ನೈಜ ಫಟನೆಗಳ ಉದಾಹಣೆಯೊಂದಿಗೆ ಮಾಹಿತಿ ನೀಡಿದರು. ಒಟ್ಟು 220 ವಿದ್ಯಾರ್ಥಿಗಳು ಈ ಮಾಹಿತಿಯ ಪ್ರಯೋಜನವನ್ನು ಪಡೆದುಕೊಂಡರು.