ದಿನಾಂಕ 15.06.2022 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಪೊರ್ಕೋಡಿ ಸಮುದಾಯ ಭವನದಲ್ಲಿ ಹೊಲಿಗೆ ತರಬೇತಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳ ಪ್ರಾರ್ಥನಾ ಹಾಡಿನೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಮತಿ ಪೂರ್ಣಾಕಲಾ ಮುಖ್ಯಾಧಿಕಾರಿ ಬಜ್ಪೆ ಪಟ್ಟಣ ಪಂಚಾಯತ್ , ಭ| ಫ್ರಿಫಿಲ್ಡಾ ಮುಖ್ಯೋಪಾಧ್ಯಾಯರು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಬಜ್ಪೆ, ಶ್ರೀಮತಿ ವನಜಾ ಮಾಜಿ ಉಪಾಧ್ಯಾಕ್ಷರು, ಶ್ರೀ ರಾಜೇಶ್ ಅಮೀನ್ ಹಿಂದುಳಿದ ಮೊರ್ಚಾ ಅಧ್ಯಕ್ಷರು, ಶ್ರೀಮತಿ ರೇಖಾ ಕಾರ್ಯನಿರ್ವಾಕರು ಹಿರಿಯರ ಮನೆ, ಶ್ರೀಮತಿ ಜೀನಾ ಬೊಂದೇಲ್, ಶ್ರೀಮತಿ ನಳಿನಿ ಸಹೋದಯ ಸಂಸ್ಥೆಯ ಕಾರ್ಯಕರ್ತೆಯರು ಮೊದಲಾದವರು ಉಪಸ್ಥಿತರಿದ್ದರು. ಬಂದಂತಹ ಅತಿಥಿಗಳನ್ನು ಶ್ರೀಮತಿ ಪೂರ್ಣಿಮ ಇವರು ಹೂ ನೀಡಿ ಸ್ವಾಗತಿಸಿದರು. ನಂತರ ದೀಪವನ್ನು ಬೆಳಗಿಸುವ ಮೂಲಕ ತರಬೇತಿಗೆ ಚಾಲನೆಯನ್ನು ನೀಡಲಾಯಿತು. ತದನಂತರ ಶ್ರೀಮತಿ ಪೂರ್ಣಾಕಲಾ ಇವರು ಮಹಿಳಾ ವೃತ್ತಿಪರ ಕೌಶಲ್ಯದ ಕುರಿತು ಉತ್ತಮವಾದ ಸಂದೇಶವನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತ ಭ| ಫ್ರಿಫಿಲ್ಡಾ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಹಿತನುಡಿಗಳಾನ್ನಾಡಿ ಇದೇ ರೀತಿ ಇನ್ನೂ ಹೆಚ್ಚಿನ ತರಬೇತಿಗಳನ್ನು ನೀಡುತ್ತಿರಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ನಿರೂಪಣೆ ಕು| ರಂಜಿನಿ( ಸಹೋದಯ ಸಂಸ್ಥೆಯ ಸಿಬ್ಬಂದಿ) ಲಘು ಉಪಹಾರವನ್ನು ನೀಡಿ ಶ್ರೀಮತಿ ನಳಿನಿ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.