ದಿನಾಂಕ 23.04.2022 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಹಾಗೂ ವಿಶ್ವ ವಿದ್ಯಾನಿಲಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರ ವತಿಯಿಂದ ಕಿನ್ನಿಪದವು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ನಡೆಸಲಾಯಿತು. ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಸಹೋದಯ ಸಂಸ್ಥೆಯ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ, ಕು| ರಂಜಿನಿ, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯಾದ ಕು|ಲೋಲಾಕ್ಷಿ, ಸಿಂಚನ ಮಹಿಳಾ ಮಂಡಲದ ಸದಸ್ಯೆಯಾದ ಕು| ಮಮ್ತಾಜ್, ಅಂಗನವಾಡಿ ಕಾರ್ಯಕರ್ತೆಯರು ಮೊದಲಾದವರು ಉಪಸ್ಥಿತರಿದ್ದರು. ಶ್ರೀಮತಿ ನಳಿನಿ ಇವರು 5ನೇ ತರಗತಿಯಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಮೊಬೈಲ್ ಬಳಕೆ ಹಾಗೂ ಮಾದಕ ವ್ಯಸನದ ದುಷ್ಫರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ತದನಂತರ ಕು| ಲೋಲಾಕ್ಷಿ ಇವರು ಆಟದ ಮೂಲಕ ಮಕ್ಕಳ ಸ್ವ ಪರಿಚಯವನ್ನು ಮಾಡಿಸಿ ಏಕಾಗ್ರತೆಯನ್ನು ಹೆಚ್ಚಿಸುವ ಚಟುವಟಿಕೆಯನ್ನು ನೀಡಿದರು ನಂತರ ಮಕ್ಕಳಿಗೆ ಆಟಗಳನ್ನು ಆಡಿಸಿ ಬಹುಮಾನವನ್ನು ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆಯರ ಧನ್ಯವಾದದೊಂದಿಗೆ ಸಿಹಿಯನ್ನು ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಒಟ್ಟು 34 ಮಕ್ಕಳು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದುಕೊಂಡರು.