ದಿನಾಂಕ 7.04.2022 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು,ಮಂಗಳೂರು ವತಿಯಿಂದ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಂಜಾರು ಇಲ್ಲಿನ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗಿನ ಮಕ್ಕಳಿಗೆ ಒಂದು ದಿನದ ಬೇಸಿಗೆ ಶಿಬಿರವನ್ನು ಆಯೋಜಿಸಲಾಯಿತು. ದೇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವೇದಿಕೆಯಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾ ಭ| ಲೀನಾ ಡಿ ಕೋಸ್ಟ, ಶಾಲಾ ಮುಖ್ಯೋಪಾಧ್ಯಾಯಿ ಶ್ರೀಮತಿ ರೋಸ್‍ಲೀನ್, ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶೋಭಾ, ಸಹೋದಯ ಸಂಸ್ಥೆಯ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ, ಕು| ರಂಜಿನಿ, ಸಹೋದಯ ಒಕ್ಕೂಟದ ಅಧ್ಯಕ್ಷೆಯಾದ ಶ್ರೀಮತಿ ಪ್ರೇಮ ಎಲ್ ಮೊದಲಾದವರು ಉಪಸ್ಥಿತರಿದ್ದರು. ಭ| ಲೀನಾ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಬೇಸಿಗೆ ಶಿಬಿರ ಏಕೆ ಮಾಡಬೇಕು? ಇದರಿಂದಾಗುವ ಪ್ರಯೋಜನವೇನು ಎಂಬುದರ ಬಗ್ಗೆ ಹಾಗೂ ಮಕ್ಕಳ ಪಾರ್ಲಿಮೆಂಟ್ , ಮಕ್ಕಳ ಮುಂದಿನ ಕಲಿಕೆಗೆ ಪೂರಕವಾದ ಸಹೋದಯ ಕಲಿಕಾ ಸಮಾಥ್ರ್ಯ ಸ್ಫರ್ಧಾ ಪರೀಕ್ಷೆಯನ್ನು ನಡೆಸುವ ಉತ್ತಮ ಮಾಹಿತಿಗಳನ್ನು ನೀಡಿದರು ನಂತರ ಶ್ರೀಮತಿ ಶೋಭಾ ಇವರು ಮಕ್ಕಳಿಗೆ ಸ್ಛಚ್ಛ ಗೆಳತಿ, ಸ್ಫರ್ಶತೆ ಮತ್ತು ಅಂಗಾಂಗಗಳ ಬಗ್ಗೆ, ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ತದನಂತರ ಶ್ರೀಮತಿ ನಳಿನಿ ಹಾಗೂ ಪ್ರೇಮ ಇವರು ಮಕ್ಕಳನ್ನು ಗುಂಪುಗಳನ್ನಾಗಿಸಿ ವಾರ್ತಾ ಪತ್ರಿಕೆಯನ್ನು ನೀಡಿ ಅದರಲ್ಲಿ ಅವರಿಗೆ ಸಿಕ್ಕ ವಿಷಯವನ್ನಾಧರಿಸಿ ತಮ್ಮ ಗುಂಪಿನ ಸದಸ್ಯನೊರ್ವನನ್ನು ತಯಾರಿಸುವಂತೆ ಸೂಚಿಸಲಾಯಿತು. ನಂತರ ಮಕ್ಕಳಿಗೆ ಆಟಗಳನ್ನು ಆಡಿ ಬಹುಮಾನವನ್ನು ನೀಡಲಾಯಿತು, ಮಕ್ಕಳಿಂದಲ್ಲೆ ನೃತ್ಯ, ಹಾಡುಗಳನ್ನು ಹಾಡಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರ ಧನ್ಯವಾದದೊಂದಿಗೆ ಸಿಹಿಯನ್ನು ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.