ದಿನಾಂಕ 3.03.2022 ರಿಂದ 4.03.2022 ರವರೆಗೆ ಎಫ್‍ವಿಟಿಆರ್‍ಎಸ್ ಸಂಸ್ಥೆ ಬೆಂಗಳೂರು ಇವರ ವತಿಯಿಂದ ಸಹೋದಯ ಸಭಾಂಗಣದಲ್ಲಿ. ಮಹಿಳಾ ಸ್ವ-ಉದ್ಯೋಗದ ಬಗ್ಗೆ 3 ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವೇದಿಕೆಯಲ್ಲಿ ಸಹೋದಯ ಸಂಸ್ಥೆಯ ಸಂಯೋಜಕರಾದ ಭ| ಲೀನಾ ಡಿ ಕೋಸ್ಟ , ಜೀವನ್‍ಧಾರ ಸಂಸ್ಥೆಯ ಭ| ಅನ್ನ ಮರಿಯ (ಕಾರ್ಯದರ್ಶಿ) , ಎಫ್‍ವಿಟಿಆರ್‍ಎಸ್ ಸಂಸ್ಥೆಯ ಶ್ರೀ ಜಿಮ್ಮಿ ಮ್ಯಾತೆವ್ ಕಾರ್ಯಕ್ರಮ ಸಂಯೋಜಕರು, ಶ್ರೀಮತಿ ಸುರೇಖಾ ಸಂಪನ್ಮೂಲವ್ಯಕ್ತಿ, ಮೊದಲಾದವರು ಉಪಸ್ಥಿತರಿದ್ದರು. ಶ್ರೀಮತಿ ಸುರೇಖಾ ಇವರು ಮಹಿಳೆಯರಿಗೆ ಸ್ವ-ಉದ್ಯೋಗಗಳಾದ ಉಪ್ಪಿನಕಾಯಿ, ಟೈಲರಿಂಗ್, ಕೆಟ್ರಸ್ ಮೊದಲಾದ ವ್ಯಾಪಾರಗಳ ಬಗ್ಗೆ ಮಾಹಿತಿ ನೀಡಿದರು. ತದನಂತರ ಉದ್ಯೋಗದ ಬಗ್ಗೆ ಕಿರು ಚಿತ್ರಣದ ಮೂಲಕಶ ತೋರಿಸಿ ಈ ಬಗ್ಗೆ ತರಬೇತಿದಾರರಲ್ಲಿ ಮೌಲ್ಯ ಮಾಪನ ಮಾಡಲಾಯಿತು. ಪಿಪಿಟಿ ಯ ಮುಖಾಂತರ ಕೆಲವೊಂದು ಮಾಹಿತಿ ಹಾಗೂ ತರಬೇತಿಯನ್ನು ನೀಡಲಾಯಿತು. ತರಬೇತಿಯ ಮೂರನೇ ದಿನದಂದು ಬಿಸಿನೆಸ್ಸ್ ಪ್ಲಾನ್ ಬಗ್ಗೆ ಚರ್ಚೆ ನಡೆಸಿ ಅವರಿಂದಲ್ಲೇ ಬರೆಯಿಸಲಾಯಿತು. ಭ| ಲವಿಶಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ಸುನೀತಾ ಇವರ ಧನ್ಯವಾದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. 40 ಮಹಿಳೆಯರು ತರಬೇತಿಯನ್ನು ಪಡೆದುಕೊಂಡರು.

The Functional Vocational Training Research Society, Bangalore (FVTRS) conducted EDP training for the women at Shaodaya Bethany Seva Kendra. Mr Jimmy Mathew, the programme Coordinator of FVTRS briefed about the purpose and objectives of the training. He said that the aim of the programme was to avail local business enterprises to enhance their economic conditions. Training of trainers was conducted for three days training by Mr Jimmy Mathew the programme Coordinator of FVTRS and Mrs Surekha Master Trainer from Belgaum, on 3rd to 5th March 2022. 40 members participated for the same. There after survey of 200 SHGs eligible women was done in collaboration with four NGO’s namely Sahodaya Bethany Seva Kendra, Jeevandhar, Sapndana and Dhrma Jyothi .